ಕೆಕೆಆರ್ ಗೆಲುವಿಗೆ 205 ರನ್ ಗುರಿ ನೀಡಿದ ಆರ್ ಸಿಬಿ

Update: 2021-04-18 12:25 GMT
ಗ್ಲೆನ್ ಮ್ಯಾಕ್ಸ್ ವೆಲ್

ಚೆನ್ನೈ: ಗ್ಲೆನ್ ಮ್ಯಾಕ್ಸ್ ವೆಲ್(78, 49 ಎಸೆತ) ಹಾಗೂ  ಎಬಿಡಿ ವಿಲಿಯರ್ಸ್ (ಔಟಾಗದೆ 76, 34 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕತಾ ನೈಟ್ ರೈಡರ್ಸ್ ಗೆ ಐಪಿಎಲ್ ನ 10ನೇ ಪಂದ್ಯದ ಗೆಲುವಿಗೆ 205 ರನ್ ಗುರಿ ನೀಡಿದೆ.

ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.

ನಾಯಕ ಕೊಹ್ಲಿ 2ನೇ ಓವರ್ ನ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿ ನಿರಾಶೆಗೊಳಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ರಜತ್ ಪಾಟಿದಾರ್(1)ಕೂಡ ಬೇಗನೆ ಔಟಾದರು. ಆಗ ಜೊತೆಯಾದ ದೇವದತ್ತ ಪಡಿಕ್ಕಲ್ ಹಾಗೂ ಮ್ಯಾಕ್ಸ್ ವೆಲ್ 3ನೇ ವಿಕೆಟ್ ಜೊತೆಯಾಟದಲ್ಲಿ 86 ರನ್ ಸೇರಿಸಿ ತಂಡವನ್ನು ಆಧರಿಸಿದರು.

ಪಡಿಕ್ಕಲ್ 25 ರನ್ ಗಳಿಸಿ ಔಟಾದಾಗ ಜೊತೆಯಾದ ಮ್ಯಾಕ್ಸ್ ವೆಲ್(78, 49 ಎಸೆತ, 9 ಬೌಂ.3 ಸಿ.) ಹಾಗೂ ಡಿವಿಲಿಯರ್ಸ್ (ಔಟಾಗದೆ 76, 34 ಎಸೆತ, 9 ಬೌಂ.,3 ಸಿ.)4ನೇ ವಿಕೆಟ್ ಗೆ 53 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಕೆಕೆಆರ್ ಪರವಾಗಿ ಚಕ್ರವರ್ತಿ(2-39) ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News