ರಾಜ್ಯ ನಿಧಿಯಿಂದ ಲಸಿಕೆ ಖರೀದಿಸಲು ನಮಗೆ ಅನುಮತಿ ನೀಡಿ: ಕೇಂದ್ರಕ್ಕೆ ಮಮತಾ ಪತ್ರ

Update: 2021-04-18 13:16 GMT

ಕೋಲ್ಕತಾ: "ಲಸಿಕೆಯ ಡೋಸ್ ಗಳನ್ನು ನೇರವಾಗಿ ರಾಜ್ಯ ನಿಧಿಯಿಂದ ಖರೀದಿಸಲು ಹಾಗೂ ಎಲ್ಲರನ್ನು ಒಳಗೊಂಡಂತೆ ರಾಜ್ಯದಲ್ಲಿ ಬೃಹತ್ ಉಚಿತ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲು ಕೇಂದ್ರ ಸರಕಾರದ ಅನುಮತಿ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.

 " ರಾಜ್ಯ ನಿಧಿಯಿಂದ ನೇರವಾಗಿ ವ್ಯಾಕ್ಸಿನೇಷನ್ ಡೋಸ್ ಅನ್ನು ಖರೀದಿಸಲು ಹಾಗೂ ಎಲ್ಲರನ್ನು ಒಳಗೊಂಡ ರಾಜ್ಯದಲ್ಲಿ ಬೃಹತ್ ಉಚಿತ ವ್ಯಾಕ್ಸಿನೇಷನ್ ಅಭಿಯಾನವನ್ನು ಪ್ರಾರಂಭಿಸಲು ನಾನು ನಿಮಗೆ ಫೆಬ್ರವರಿ 24, 2021 ರಂದು ಪತ್ರ ಬರೆದಿದ್ದೇನೆ ಎಂದು ನಿಮಗೆ ನೆನಪಿಸುತ್ತಿದ್ದೇನೆ" ಎಂದು ಅವರು ಮಮತಾ ಪತ್ರದಲ್ಲಿ ಬರೆದಿದ್ದಾರೆ.

ರೆಮ್ ಡಿಸಿವಿರ್ ಮತ್ತು ಟೊಸಿಲಿಝುಮಾಬ್ ಔಷಧಿಗಳ ಪೂರೈಕೆಯನ್ನು ಹೆಚ್ಚಿಸಲು ಕೇಂದ್ರವನ್ನು ಮಮತಾ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News