ವಿಶ್ವಕಪ್ ವೇಳೆಗೆ ದ.ಆಫ್ರಿಕಾ ತಂಡಕ್ಕೆ ವಾಪಸಾಗಲು ಡಿವಿಲಿಯರ್ಸ್ ಒಲವು

Update: 2021-04-19 09:05 GMT

ಹೊಸದಿಲ್ಲಿ:  ಈ ವರ್ಷ ಭಾರತದಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ನಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ವಾಪಸಾಗಲು ನಾನು ಮುಕ್ತ ಮನಸ್ಸಿನಲ್ಲಿದ್ದೇನೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಷ್ಟ್ರೀಯ ಕೋಚ್ ಮಾರ್ಕ್ ಬೌಚರ್ ಅವರೊಂದಿಗೆ ಚರ್ಚೆ ನಡೆಸುವೆ ಎಂದು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು ಹೇಳಿದ್ದಾರೆ.

37 ರ ಹರೆಯದ ಡಿವಿಲಿಯರ್ಸ್ 2018ರಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗಿದ್ದರು. ಆದರೆ, ಕೋವಿಡ್-19ನಿಂದಾಗಿ ಕಳೆದ ವರ್ಷ ನಡೆಯಬೇಕಾಗಿದ್ದ ಟ್ವೆಂಟಿ-20 ವಿಶ್ವಕಪ್ ಈ ವರ್ಷಕ್ಕೆ ಮುಂದೂಡಿಕೆಯಾದಾಗ ನಿವೃತ್ತಿ ನಿರ್ಧಾರವನ್ನು ಹಿಂಪಡೆಯುವ ಕುರಿತು ಚಿಂತಿಸುವುದಾಗಿ ಕಳೆದ ವರ್ಷ ಎಪ್ರಿಲ್ ನಲ್ಲಿ ಹೇಳಿದ್ದರು.

ಕಳೆದ ವರ್ಷ ಕೋಚ್ ಬೌಚರ್ ಅವರು ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಲು ಆಸಕ್ತಿ ಇದೆಯೇ ಎಂದು ನನ್ನಲ್ಲಿ ಕೇಳಿದ್ದರು. ಅದಕ್ಕೆ ನಾನು ಖಂಡಿತವಾಗಿಯೂ ಬರುತ್ತೇನೆ ಎಂದು ಹೇಳಿದ್ದೇನೆ. ನಾವೀಗ ಆ ಕುರಿತಾಗಿ ಮಾತನಾಡುತ್ತಿದ್ದೇವೆ ಎಂದು ರವಿವಾರ ಆರ್‍ಸಿಬಿ ಪರ 76 ರನ್ ಗಳಿಸಿ ತಂಡದ 38 ರನ್ ಗೆಲುವಿಗೆ ನೆರವಾಗಿದ್ದ ಡಿವಿಲಿಯರ್ಸ್ ಸುದ್ದಿಗಾರರಿಗೆ ತಿಳಿಸಿದರು./

ಡಿವಿಲಿಯರ್ಸ್ ದ.ಆಫ್ರಿಕಾದ ಪರ 78 ಟಿ-20 ಪಂದ್ಯಗಳನ್ನು ಆಡಿದ್ದು, 26.12 ಸರಾಸರಿಯಲ್ಲಿ 1,672 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News