ಬಂಗಾಳದಲ್ಲಿ ಬಿಜೆಪಿ ಸಣ್ಣ ರ‍್ಯಾಲಿಗಳನ್ನು ಮಾತ್ರ ನಡೆಸಲಿದೆ: ಜೆ.ಪಿ.ನಡ್ಡಾ

Update: 2021-04-19 16:42 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಮತದಾನ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ 500 ಜನರನ್ನು ಮೀರದ ಸಭೆ ನಡೆಸಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ಹೇಳಿದ್ದಾರೆ.

ಸದ್ಯದ ಕೋವಿಡ್ -19 ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೋವಿಡ್ -19 ಶಿಷ್ಟಾಚಾರವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಈಗ ಮೈದಾನಗಳಲ್ಲಿ ಸಣ್ಣ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಲಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಆರು ಕೋಟಿ ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸುವ ಗುರಿ ಹೊಂದಿದೆ ಎಂದು ಬಿಜೆಪಿ ಹೇಳಿದೆ.

"ಅಪ್ನಾ ಬೂತ್ - ಕರೋನಾ ಮುಕ್ತ" ಕಾರ್ಯಕ್ರಮವನ್ನು ಮಂಗಳವಾರದಿಂದ ಪ್ರಾರಂಭಿಸುವಂತೆ ಜೆಪಿ ನಡ್ಡಾ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ ಇನ್ನು ಮುಂದೆ ಪ್ರಚಾರ ಮಾಡುವುದಿಲ್ಲ ಎಂದು ಸಂಸದ ಡರೆಕ್ ಒಬ್ರಿಯಾನ್ ಘೋಷಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬಂಗಾಳದಲ್ಲಿ ತನ್ನ ಎಲ್ಲ ರ‍್ಯಾಲಿಗಳನ್ನು ರದ್ದುಪಡಿಸಿ ಎಲ್ಲರಿಗೂ ಮಾದರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News