ಕೊರೋನ ಸೋಂಕಿಗೆ ಜೆಡಿಯು ಶಾಸಕ ಮೇವಾಲಾಲ್‌ ಚೌಧರಿ ಬಲಿ

Update: 2021-04-19 17:36 GMT

ಪಾಟ್ನಾ, ಎ. 19: ಕೊರೋನ ಸೋಂಕಿಗೆ ಒಳಗಾಗಿ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೆಡಿಯು ಶಾಸಕ ಮೇವಾಲಾಲ್ ಚೌಧರಿ (68) ಅವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿತೀಶ್ ಕುಮಾರ್ ಅವರ ನೂತನ ಸಂಪುಟದಲ್ಲಿ ಚೌಧರಿ ಅವರನ್ನು ಕಳೆದ ವರ್ಷ ನವೆಂಬರ್ನಲ್ಲಿ ಶಿಕ್ಷಣ ಸಚಿವರನ್ನಾಗಿ ನಿಯೋಜಿಸಲಾಗಿತ್ತು. ಆದರೆ, ಅವರ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ಕೋಲಾಹಲ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಅವರು ನಿಯೋಜನೆಯಾದ ಮೂರೇ ದಿನಗಳಲ್ಲಿ ರಾಜೀನಾಮೆ ಸಲ್ಲಿಸಿದ್ದರು. 

ಚೌಧರಿ ಅವರು ಮುಂಗೇರ್ ಜಿಲ್ಲೆಯ ತಾರಾಪುರದ ಶಾಸಕ. ಕೊರೋನ ಪಾಸಿಟಿವ್ ವರದಿಯಾದ ಬಳಿಕ ಅವರನ್ನು ಎರಡು ದಿನಗಳ ಹಿಂದೆ ಪಾಟ್ನಾದ ಪಾರಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರು ಇಂದು ಬೆಳಗ್ಗೆ ಮೃತಪಟ್ಟರು ಎಂದು ಆಸ್ಪತ್ರೆಯ ನಿರ್ದೇಶಕ (ಶಸ್ತ್ರಚಿಕಿತ್ಸೆ) ಡಾ. ಅಹ್ಮದ್ ಅಬ್ದುಲ್ ಅವರು ತಿಳಿಸಿದ್ದಾರೆ. ಚೌಧರಿ ಅವರ ನಿಧನಕ್ಕೆ ರಾಜ್ಯಪಾಲ ಪಾಗು ಚೌಹಾಣ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News