ಗುಜರಾತ್‌ ನ ವಡೋದರಾ ಮಸೀದಿಯಲ್ಲಿ 50 ಹಾಸಿಗೆಗಳ ಕೋವಿಡ್‌ ಆರೈಕೆ ಕೇಂದ್ರ ಆರಂಭ

Update: 2021-04-20 10:55 GMT

ವಡೋದರ: ಗುಜರಾತ್‍ನಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿರುವ ಹಿನ್ನೆಲೆಯಲ್ಲಿ  ರಾಜ್ಯದ ವಡೋದರಾ ನಗರದ ಜಹಾಂಗೀರಪುರ ಪ್ರದೇಶದಲ್ಲಿರುವ ಮಸೀದಿಯನ್ನು 50 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಅಲ್ಲಿನ ಆಡಳಿತ ಪರಿವರ್ತಿಸಿ ಮಾನವೀಯತೆ ಮೆರೆದಿದೆ. ಕೋವಿಡ್ ರೋಗಿಗಳಿಗೆ ಹಲವೆಡೆ  ಆಸ್ಪತ್ರೆಗಳಲ್ಲಿ ಬೆಡ್ ದೊರೆಯದೆ ಸಮಸ್ಯೆ ಎದುರಾಗುತ್ತಿರುವುದನ್ನು ಕಂಡು ಅಂತಹ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಮಸೀದಿ ಆಡಳಿತ ಇಂತಹ ಒಂದು ಕ್ರಮ ಕೈಗೊಂಡಿದೆ.

ಮುಸ್ಲಿಮರ ಪವಿತ್ರ ರಮಝಾನ್ ತಿಂಗಳಲ್ಲಿ ಈ ಕೋವಿಡ್ ಆರೈಕೆ ಕೇಂದ್ರ ಆರಂಭಗೊಂಡಿದೆ ಎಂದು ಮಸೀದಿಯ ಟ್ರಸ್ಟೀಗಳಲ್ಲೊಬ್ಬರಾಗಿರುವ ಇರ್ಫಾನ್ ಶೇಖ್ ಹೇಳಿದ್ದಾರೆ.

"ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರಿಂದ ಆಕ್ಸಿಜನ್ ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ. ಇದೇ ಕಾರಣಕ್ಕೆ ನಾವು ಮಸೀದಿಯಲ್ಲಿ 50 ಬೆಡ್ ಕೋವಿಡ್ ಆರೈಕೆ ಕೇಂದ್ರ ಒದಗಿಸಿದ್ದೇವೆ. ಇಂತಹ ಕೇಂದ್ರ ಆರಂಭಿಸಲು ರಮಝಾನ್ ತಿಂಗಳಿಗಿಂತ ಬೇರೆ ಯಾವ ಉತ್ತಮ ಸಮಯ ಬೇಕು?" ಎಂದು ಶೇಖ್ ಕೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News