ಮಹಾರಾಷ್ಟ್ರ: ಅಂಗಡಿಗಳು, ಮಾರುಕಟ್ಟೆಗಳು ಬೆಳಗ್ಗೆ 7ರಿಂದ 11ರ ತನಕ ಮಾತ್ರ ಓಪನ್

Update: 2021-04-20 11:41 GMT

ಮುಂಬೈ: ಕೋವಿಡ್ ವಿರುದ್ಧ ಹೋರಾಡಲು ಇಂದು  ಕಠಿಣ ಕ್ರಮಗಳನ್ನು ಆದೇಶಿಸಿರುವ ಮಹಾರಾಷ್ಟ್ರ ಸರಕಾರ ದಿನಸಿ, ತರಕಾರಿ ಅಂಗಡಿಗಳು, ಮಾರುಕಟ್ಟೆಗಳು ಹಾಗೂ ಡೈರಿಗಳು ಕೇವಲ ನಾಲ್ಕು ಗಂಟೆಗಳ ಕಾಲ ತೆರೆದಿರುತ್ತವೆ ಹಾಗೂ  ರಾತ್ರಿ 8 ಗಂಟೆಯ ನಂತರ ಅಂಗಡಿಗಳಿಂದ ಹೋಮ್ ಡೆಲಿವರಿಗೆ ಅನುಮತಿಸುವುದಿಲ್ಲ ಎಂದು ಹೇಳಿದೆ.

ರಾಜ್ಯ ಸರಕಾರದ ಹೊಸ ಆದೇಶದ ಪ್ರಕಾರ ಎಲ್ಲಾ ದಿನಸಿ, ತರಕಾರಿ ಅಂಗಡಿಗಳು, ಡೈರಿಗಳು, ಬೇಕರಿಗಳು, ಹಣ್ಣು ಮಾರಾಟಗಾರರು ಬೆಳಿಗ್ಗೆ 7 ರಿಂದ 11 ರವರೆಗೆ ಮಾತ್ರ ತೆರೆದಿರುತ್ತಾರೆ. ಬೇಕರಿಗಳು, ಆಹಾರವನ್ನು ಮಾರಾಟ ಮಾಡುವ ಎಲ್ಲಾ ಅಂಗಡಿಗಳು (ಕೋಳಿ, ಮಟನ್, ಮೀನು ಮತ್ತು ಮೊಟ್ಟೆಗಳನ್ನು ಒಳಗೊಂಡಂತೆ) ರಾತ್ರಿ 8 ರವರೆಗೆ ತೆರೆದಿರುತ್ತಿದ್ದವು, ಆದರೆ ಈಗ ಕೇವಲ ನಾಲ್ಕು ಗಂಟೆಗಳು ಮಾತ್ರ ತೆರೆದಿರಬೇಕಾಗುತ್ತದೆ.

ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ದಿನಸಿ, ಆಹಾರ ಅಂಗಡಿಗಳಿಂದ ಹೋಮ್ ಡೆಲಿವರಿಗೆ ಅನುಮತಿ ಇದೆ. ಆದರೆ

 ಸ್ಥಳೀಯ ಅಧಿಕಾರಿಗಳು ಸಮಯವನ್ನು ಬದಲಿಸಬಹುದು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News