ರಾಹುಲ್ ಗಾಂಧಿ ಚೇತರಿಕೆಗೆ ಹಾರೈಸಿದ ಪ್ರಧಾನಿ ಮೋದಿ

Update: 2021-04-20 12:09 GMT

ಹೊಸದಿಲ್ಲಿ: ಕೊರೋನ ಸೋಂಕಿಗೆ ಒಳಗಾಗಿರುವ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೇಗನೆ ಚೇತರಿಸಿಕೊಳ್ಳುವಂತೆ  ಹಾರೈಸಿದ್ದಾರೆ.

"ನಾನು ಲೋಕಸಭಾ ಸಂಸದ ರಾಹುಲ್ ಗಾಂಧೀಜಿ ಅವರ ಉತ್ತಮ ಆರೋಗ್ಯ ಹಾಗೂ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುವೆ'' ಎಂದು ನರೇಂದ್ರ ಮೋದಿ ಅವರು ಮಂಗಳವಾರ ಟ್ವೀಟಿಸಿದ್ದಾರೆ.

"ನನಗೆ ಕೊರೋನದ ಸೌಮ್ಯ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ'' ಎಂದು ರಾಹುಲ್ ಗಾಂಧಿ ಅವರು ಇಂದು ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News