ದೇಶದ ಈಗಿನ ಪರಿಸ್ಥಿತಿಯಲ್ಲಿ ಲಾಕ್‌ ಡೌನ್‌ ಹೇರುವಂತೆ ಮಾಡಬೇಡಿ: ಜನರಿಗೆ ಪ್ರಧಾನಿ ಮೋದಿ ಮನವಿ

Update: 2021-04-20 18:12 GMT

ಹೊಸದಿಲ್ಲಿ, ಎ.10: ದೇಶಕ್ಕೆ ಕೊರೋನ ವೈರಸ್ ಸೋಂಕಿನ ಎರಡನೆ ಅಲೆ ಚಂಡಮಾರುತದಂತೆ ಅಪ್ಪಳಿಸಿದೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಲಾಕ್ಡೌನ್ ಹೇರಿಕೆಯನ್ನು ಕಟ್ಟಕಡೆಯ ಅಸ್ತ್ರವಾಗಿ ಮಾತ್ರ ಬಳಸಬೇಕೆಂದು ಅವರು ರಾಜ್ಯಗಳಿಗೆ ಮನವಿ ಮಾಡಿದ್ದಾರೆ. ದೇಶದ ಜನತೆ ಕಟ್ಟುನಿಟ್ಟಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಅಗತ್ಯ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಹೋಗಬೇಕೆಂದು ಅವರು ಕರೆ ನೀಡಿದ್ದಾರೆ.

ಮಂಗಳವಾರ ರಾತ್ರಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘‘ರಾಜ್ಯಗಳು ಲಾಕ್ಡೌನ್ ಹೇರಿಕೆಯನ್ನು ಕಟ್ಟಕಡೆಯ ಅಸ್ತ್ರವಾಗಿ ಮಾತ್ರ ಬಳಸಿಕೊಳ್ಳಬೇಕು. ಕೋವಿಡ್-19 ಹಾವಳಿ ಹೆಚ್ಚಿರುವ ಅತಿ ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳ ಬಗ್ಗೆ ಗಮನಹರಿಸಬೇಕು. ನಮ್ಮ ದೇಶದ ಜನತೆಯ ಆರೋಗ್ಯದ ಜೊತೆಗೆ ದೇಶದ ಆರ್ಥಿಕತೆಯ ಆರೋಗ್ಯದ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ ಎಂದರು.

ಸದ್ಯಕ್ಕೆ ದೇಶದಲ್ಲಿ ಲಾಕ್ಡೌನ್ ಹೇರುವ ಚಿಂತನೆಯನ್ನು ಕೇಂದ್ರ ಸರಕಾರ ಹೊಂದಿಲ್ಲವೆಂದು ಪ್ರಧಾನಿ ಭಾಷಣದಲ್ಲಿ ಸ್ಪಷ್ಟಪಡಿಸಿದರು.

‘‘ಕೆಲವು ವಾರಗಳ ಕಾಲ ದೇಶದಲ್ಲಿ ಕೋರೋನ ಸೋಂಕಿನ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ನಾವು ಆಗಷ್ಟೇ ಕೋವಿಡ್-19 ಮೊದಲ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದೆವು. ಆದರೆ ಎರಡನೆ ಅಲೆಯು ಚಂಡಮಾರುತದಂತೆ ಬಂದು ಅಪ್ಪಳಿಸಿದೆ’’ ಎಂದು ಪ್ರಧಾನಿ ಹೇಳಿದರು.
 
ಸೋಂಕಿನಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕೊರೋನ ಮಹಾಮಾರಿಯನ್ನು ನಿಯಂತ್ರಿಸುವ ಅತಿ ದೊಡ್ಡ ಸವಾಲು ದೇಶದ ಮುಂದಿದೆ. ಆದರೆ ದೃಢನಿರ್ಧಾರ ಹಾಗೂ ಸಂಕಲ್ಪದೊಂದಿಗೆ ನಾವು ಈ ಮಹಾಬಿಕ್ಕಟ್ಟನ್ನು ದಾಟಿಹೋಗಲಿದ್ದೇವೆ’’ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು.

ಪ್ರಧಾನಿ ಭಾಷಣದ ಹೈಲೆಟ್ಸ್
 
1. ವಲಸೆ ಕಾರ್ಮಿಕರು ತಮ್ಮ ಸ್ಥಳದಲ್ಲೇ ಉಳಿದುಕೊಳ್ಳಬೇಕು. ಅವರಿಗೆ ಲಸಿಕೆಯನ್ನು ಒದಗಿಸಲಾಗುವುದು ಹಾಗೂ ಅವರು ಉದ್ಯೋಗಗಳನ್ನು ಕಳೆದುಕೊಳ್ಳುವುದಿಲ್ಲ್ಲವೆಂದು ಭರವಸೆ ನೀಡುವೆ.

2. ದೇಶದ ವಿವಿಧ ಭಾಗಗಳಲ್ಲಿ ಆಮ್ಲಜನಕದ ಸಿಲಿಂಡರ್ಗಳಿಗಾಗಿ ಬೇಡಿಕೆ ಹೆಚ್ಚಾ ಗುತ್ತದೆ. ಕೇಂದ್ರ, ರಾಜ್ಯ ಸರಕಾರ ಹಾಗೂ ಖಾಸಗಿ ವಲಯವು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಆಮ್ಲಜನಕ ಲಭ್ಯವಾಗುವಂತೆ ಮಾಡಲು ಯತ್ನಿಸಲಿವೆ. ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
 
3.ಆಸ್ಪತ್ರೆಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಲು ಶ್ರಮಿಸಲಾಗುತ್ತಿದೆ. ಕೆಲವು ನಗರಗಳಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದೇ ದೊಡ್ಡ ಮಟ್ಟದ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ.

4. ಭಾರತವು ಎರಡನೆ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಸಿದ್ಧಪಡಿಸಿದೆ. ಈವರೆಗೆ 12 ಕೋಟಿಗೂ ಅಧಿಕ ವ್ಯಾಕ್ಸಿನ್ನ ಡೋಸ್ ಗಳನ್ನು ನೀಡಲಾಗಿದೆ.

5. ಆರೋಗ್ಯ ಕಾರ್ಯಕರ್ತರ ನೋವು, ಬವಣೆಯನ್ನು ನಾನು ಅರಿತಿದ್ದೇನೆ. ಯಾವುದೇ ಸನ್ನಿವೇಶದಲ್ಲಿಯೂ ನಾವು ತಾಳ್ಮೆ ಕಳೆದುಕೊಳ್ಳಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News