ಎ.23 ರವರೆಗೆ ಮಂಗಳೂರಿನಲ್ಲಿ ಪ್ರಮುಖ ಬ್ರಾಂಡ್‌ಗಳ ಗಾರ್ಮೆಂಟ್ಸ್ ಮಾರಾಟ

Update: 2021-04-21 10:44 GMT

ಮಂಗಳೂರು, ಎ.17: ಭಾರತದ ಪ್ರಮುಖ ಮಾಲ್‌ಗಳು ಮತ್ತು ಶೋರೂಂಗಳಿಂದ ಸಂಗ್ರಹಿಸಿದ ಬಟ್ಟೆಬರೆಗಳ ಬೃಹತ್ ಮಾರಾಟವನ್ನು ನಗರದ ಡಾ.ಟಿಎಂಎ ಪೈ ಇಂಟರ್‌ನ್ಯಾಷನಲ್ ಕನೆ್ವನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದು, ಕೋವಿಡ್ ಮಾರ್ಗಸೂಚಿಯಂತೆ ಸುರಕ್ಷಿತ ಅಂತರದೊಂದಿಗೆ ಮಾರಾಟ ನಡೆಸುವ  ಉದ್ದೇಶದೊಂದಿಗೆ ಎ.23ರವರೆಗೆ ವಿಸ್ತರಿಸಲಾಗಿದೆ.

ಎಲ್ಲಾ ಪ್ರಮುಖ ಅಂತರ್‌ರಾಷ್ಟ್ರೀಯ ಬ್ರಾಂಡ್‌ಗಳ, ಪುರುಷರು, ಮಕ್ಕಳು ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೆ ತಕ್ಕುದಾದ ಉಡುಪುಗಳು ಕನಿಷ್ಠ ರಿಯಾಯಿತಿ ಬೆಲೆಯಲ್ಲಿ ಇಲ್ಲಿ ಲಭ್ಯವಿದೆ.

ಎಂಆರ್‌ಪಿ ದರ 2500-3000 ರೂ. ಗಳ ಪ್ರೀಮಿಯಂ ಟಿ ಶರ್ಟ್‌ಗಳು ಕೇವಲ 330 ರೂ.ನಿಂದ 500 ರೂ.ನಲ್ಲಿ, ಕ್ಯಾಶುವಲ್, ಫಾರ್ಮಲ್ ಶರ್ಟ್ ಎಂಆರ್‌ಪಿ ದರ 4,000-6,000 ರೂ. ಇದ್ದು, ಕೇವಲ 600 ರಿಂದ 800 ರೂ. ಮಾತ್ರ. ಮಹಿಳೆಯರ, ಪುರುಷರ ಬಟ್ಟೆಗಳು ಎಂಆರ್‌ಪಿ ದರ 2,500-3,000 ರೂ. ಇದ್ದು, ಕೇವಲ ರೂ.700ರಿಂದ 1,200ರೂ. ಮಾತ್ರ. ಮಹಿಳೆಯರು, ಪುರುಷರು ಮತ್ತು ಮಕ್ಕಳ ಒಟ್ಟು ಬಟ್ಟೆಬರೆಗಳು ಎಂಆರ್‌ಪಿ ದರ 1,000-3000 ರೂ. ಇದ್ದುಕೇವಲ 200 ರಿಂದ 500 ರೂ. ಗಳಲ್ಲಿ ಲಭ್ಯ. ಇದಲ್ಲದೆ ಪುರುಷರ ಟಿ ಶರ್ಟ್‌ಗಳು, ಶಾರ್ಟ್ಸ್, ಕುರ್ತಿ, ಪೈಜಾಮ ಕೇವಲ 100 ರೂ.ನಿಂದ 300 ರೂ.ನಲ್ಲಿ ಲಭ್ಯ. ಮಹಿಳೆಯರು ಮತ್ತು ಪುರುಷರ ಸ್ಲಿಪ್ಪರ್‌ಗಳು ಮತ್ತು ಸ್ಯಾಂಡಲ್‌ಗಳು, ಸ್ಪೋರ್ಟ್ಸ್ ಶೂಗಳು, ಪ್ಯೂರ್ ಲೆದರ್ ಶೂ, ಮಹಿಳೆಯರ ಬ್ರಾ ಹಾಗೂ ಪ್ಯಾಂಟಿಗಳು ಕೂಡಾ ಅತೀ ಕಡಿಮೆ ದರಗಳಲ್ಲಿ ಇಲ್ಲಿ ಲಭ್ಯವಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಬ್ರಾಂಡೆಡ್ ಬಟ್ಟೆಬರೆಗಳ ಈ ಮಾರಾಟವನ್ನು ಒಂದೇ ಸೂರನಡಿ ವಿಶಾಲವಾದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಪ್ರದರ್ಶನ ಹಾಗೂ ಮಾರಾಟ ಇನ್ನು ಕೇವಲ ಎರಡು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News