​ಮಾಸ್ಕ್ : 1,02,400 ರೂ. ದಂಡ ಸಂಗ್ರಹ !

Update: 2021-04-21 12:33 GMT

ಉಡುಪಿ, ಎ.21: ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ 971 ಮಂದಿಯಿಂದ ಎ.20ರಂದು ಒಂದೇ ದಿನ 1,02400ರೂ. ದಾಖಲೆ ಪ್ರಮಾಣದಲ್ಲಿ ದಂಡ ಸಂಗ್ರಹ ಮಾಡಲಾಗಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 7050ರೂ., ಗ್ರಾಪಂ ವ್ಯಾಪ್ತಿಯಲ್ಲಿ 1800ರೂ., ಅಬಕಾರಿ ಇಲಾಖೆಯಿಂದ 2000ರೂ., ಕಂದಾಯ ಇಲಾಖೆಯಿಂದ 3100ರೂ., ಪೊಲೀಸ್ ಇಲಾಖೆಯಿಂದ 85,450ರೂ., ಮೀನುಗಾರಿಕೆ ಇಲಾಖೆ 1600ರೂ., ಪ್ರವಾಸೋದ್ಯಮ ಇಲಾಖೆಯಿಂದ 900ರೂ., ಎಪಿಎಂಸಿಯಿಂದ 500ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ಧರಿಸದ 30,628 ಮಂದಿಯಿಂದ 32,45,050ರೂ. ದಂಡ ಸಂಗ್ರಹಿಸಲಾಗಿದೆ ಎಂದು ಉಡುಪಿ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News