ಮದ್ಯ ಮಾರಾಟ ಸನ್ನದುದಾರರ ಸಮಸ್ಯೆ ಪರಿಶೀಲಿಸಿ ಕ್ರಮಕ್ಕೆ ಮನವಿ

Update: 2021-04-21 12:43 GMT

ಉಡುಪಿ, ಎ.21: ಕೋವಿಡ್ ಎರಡನೇ ಅಲೆ ಸಂಬಂಧ ವಾಣಿಜ್ಯ ಮಾರ್ಗ ಸೂಚಿಗಳನ್ನು ಅಳವಡಿಸುವಾಗ ಚಿಲ್ಲರೆ ಮದ್ಯ ಮಾರಾಟ ಸನ್ನದುದಾರರ ಸಮಸ್ಯೆಗಳನ್ನು ಸಹನಾಭೂತಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮದ್ಯ ಮಾರಾಟಗಾರರ ಫೆಡರೇಶನ್ ವತಿಯಿಂದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.

2020ರ ಲಾಕ್‌ಡೌನ್‌ನಿಂದ ಚಿಲ್ಲರೆ ಮದ್ಯ ಮಾರಾಟ ಸನ್ನದುದಾರರು ಸುಮಾರು 48 ದಿನಗಳ ಬಂದ್ ಮಾಡಿದ್ದು, ಇದರಿಂದ ಬಹಳಷ್ಟು ನಷ್ಟ, ವಿವಿಧ ರೀತಿಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಸಿಎಲ್-9, ಸಿಎಲ್-7, ಸಿಎಲ್ -2 ಮತ್ತು ಸಿ.ಎಲ್-4 ಮತ್ತು ಇನ್ನಿತರ ಸನ್ನದುದಾರರು 1000 ಕೋಟಿಗೂ ಮಿಕಿ್ಕದ ನಷ್ಟವನ್ನು ಅನುಭವಿಸಿದ್ದಾರೆ.

ಕೋವಿಡ್ 2ನೇ ಅಲೆಯನ್ನು ನಿಗ್ರಹಿಸುವ ಸಂಬಂಧ ಈ ಹಿಂದಿನಂತೆ ಆದೇಶಗಳನ್ನು ಅನುಸರಿಸಿದಲ್ಲಿ ಆಹಾರದೊಂದಿಗೆ ಮದ್ಯ ಸೇವಿಸುವ ವರ್ಗದ ಸನ್ನದುದಾರರು, ಹಿಂದಿನ ಕೋವಿಡ್ ನಷ್ಠದಿಂದ ಮರು ಸ್ಥಾಪಿಸಿರುವ ಉದ್ಯಮ ಸಂಪೂರ್ಣವಾಗಿ ಕೊಚ್ಚಿ ಹೋಗಲಿದೆ. ಈ ಬಗ್ಗೆ ಸರಕಾರ ವಿಧಿಸುವ ಮಾರ್ಗ ಸೂಚಿಗಳನ್ನು ಪಾಲಿಸುತ್ತೇವೆ ಎಂದು ಮನವಿಯಲ್ಲಿ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News