×
Ad

ಫಿಲಿಪ್ಪೀನ್ಸ್ ಕರಾವಳಿಯಲ್ಲಿ ಸಮುದ್ರ ತಳಕ್ಕೆ ತಾಗಿದ ಸರಕು ಹಡಗು

Update: 2021-04-21 20:47 IST
ಫೋಟೊ ಕೃಪೆ: twitter.com/JeromeOLLIER

 ಮನಿಲಾ (ಫಿಲಿಪ್ಪೀನ್ಸ್), ಎ. 21: ದಕ್ಷಿಣ ಫಿಲಿಪ್ಪೀನ್ಸ್ ಕರಾವಳಿಯ ಸಮುದ್ರದಲ್ಲಿ ಸರಕು ಹಡಗೊಂದು ನೆಲಕ್ಕೆ ತಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ನಾವಿಕ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಫಿಲಿಪ್ಪೀನ್ಸ್ ತಟರಕ್ಷಣಾ ಪಡೆ ಬುಧವಾರ ತಿಳಿಸಿದೆ.

ಅದೇ ವೇಳೆ, ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಪ್ರಗತಿಯಲ್ಲಿದೆ.

‘ಎಲ್‌ಸಿಟಿ ಸೆಬು ಗ್ರೇಟ್ ಓಶನ್’ ಹಡಗು ನಿಕಲ್ ಅದಿರು ಮತ್ತು 2,000 ಲೀಟರ್ ಡೀಸೆಲ್ ಸಾಗಿಸುತ್ತಿತ್ತು. ಅದು ಸುರಿಗಾವ್ ಡೆಲ್ ನಾರ್ಟೆ ಪ್ರಾಂತದ ಕರಾವಳಿಯಲ್ಲಿ ಸೋಮವಾರ ಸಮುದ್ರ ತಳಕ್ಕೆ ತಾಗುವ ಮೊದಲು ಅದರ ಸಿಬ್ಬಂದಿ ಸಮುದ್ರಕ್ಕೆ ಹಾರಿದರು ಎಂದು ತಟರಕ್ಷಣಾ ಪಡೆ ತಿಳಿಸಿದೆ.

ಆ ಪೈಕಿ ನಾಲ್ವರ ಮೃತದೇಹಗಳು ಸಮುದ್ರ ದಡವನ್ನು ಸೇರಿದವು. ಏಳು ಮಂದಿ ಜೀವಂತವಾಗಿ ಪ್ರಾಂತದ ವಿವಿಧ ಭಾಗಗಳಲ್ಲಿ ತೀರ ಸೇರಿದರು.

ಫಿಲಿಪ್ಪೀನ್ಸ್‌ನ ಇನ್ನೊಂದು ಪ್ರಾಂತದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಾಗ ನಾವಿಕರು ಲಂಗರು ಹಾಕಿ ರಕ್ಷಣೆ ಪಡೆದಿದ್ದರು. ಆದರೆ, ಲಂಗರು ಮುರಿದು ಹಡಗು ನಿಯಂತ್ರಣ ತಪ್ಪಿ ಚಲಿಸಿತು ಹಾಗೂ ಅಂತಿಮವಾಗಿ ನೆಲಕ್ಕೆ ಒರೆಸಿತು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News