ಮಹಾರಾಷ್ಟ್ರದ ಬೈಕುಲಾ ಕಾರಾಗೃಹದ 40 ಮಹಿಳಾ ಕೈದಿಗಳಿಗೆ ಕೊರೋನ ಸೋಂಕು

Update: 2021-04-21 15:53 GMT

ಮುಂಬೈ, ಎ. 19: ಇಲ್ಲಿನ ಬೈಕುಲಾ ಕಾರಾಗೃಹದಲ್ಲಿರುವ ಇಂದ್ರಾಣಿ ಮುಖರ್ಜಿ ಹಾಗೂ ಇತರ 39 ಕೈದಿಗಳಿಗೆ ಕೊರೋನ ಸೋಂಕು ತಗಲಿದೆ. ಅವರನ್ನು ಕ್ವಾರಂಟೈನ್ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಒಳಗಾದ ಬಳಿಕ ಈ 40 ಕೈದಿಗಳಿಗೆ ಕೊರೋನ ಸೋಂಕು ತಗಲಿರುವುದು ಪತ್ತೆಯಾಯಿತು ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ. 40 ಕೈದಿಗಳಲ್ಲಿ ಹೆಚ್ಚಿನವರಲ್ಲಿ ರೋಗ ಲಕ್ಷಣ ಕಂಡು ಬಂದಿಲ್ಲ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಕೇಂದ್ರ ಮುಂಬೈಯ ಬೈಕುಲಾದಲ್ಲಿರುವ ಕಾರಾಗೃಹದ ಐಸೋಲೇಶನ್ ಕೇಂದ್ರವಾಗಿರುವ ಪಟಾಂಕರ್ ಶಾಲೆಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಓರ್ವ ಮಹಿಳಾ ಕೈದಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ದಕ್ಷಿಣ ಮುಂಬೈಯ ಸಂತ ಜಾರ್ಜ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ತರುವಾಯ ಕಾರಾಗೃಹದ 350 ಮಹಿಳಾ ಕೈದಿಗಳು, 225 ಪುರುಷ ಕೈದಿಗಳು ಹಾಗೂ 60 ಸಿಬ್ಬಂದಿಗಳನ್ನು ರ್ಯಾಪಿಡ್ ಆ್ಯಂಟೀಜನ್ ಪರೀಕ್ಷೆ ಒಳಪಡಿಸಲಾಗಿತ್ತು. ಅವರಲ್ಲಿ 40 ಮಹಿಳಾ ಕೈದಿಗಳಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News