‘ಬ್ರೇಕ್ ದಿ ಚೈನ್’ ಹೆಸರಿನಲ್ಲಿ ಸರಣಿ ನಿರ್ಬಂಧ ಘೋಷಿಸಿದ ಮಹಾರಾಷ್ಟ್ರ

Update: 2021-04-21 17:43 GMT

ಮುಂಬೈ: ರಾಜ್ಯದಲ್ಲಿ ಕೊರೋನವೈರಸ್ ಪ್ರಕರಣಗಳಲ್ಲಿನ ವಿಪರೀತ ಹೆಚ್ಚಳವನ್ನು ಎದುರಿಸಲು ಮಹಾರಾಷ್ಟ್ರ ಸರಕಾರ ಬುಧವಾರ ತಡರಾತ್ರಿ "ಬ್ರೇಕ್ ದಿ ಚೈನ್" ಎಂಬ ಹೆಸರಿನಲ್ಲಿ ಸರಣಿ ನಿರ್ಬಂಧಗಳನ್ನು ಘೋಷಿಸಿತು.

ಹೊಸ ನಿಯಮಗಳ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗದ ನಿರ್ವಹಣೆಗೆ ನೇರವಾಗಿ ಸಂಪರ್ಕ ಹೊಂದಿಲ್ಲದ ಎಲ್ಲಾ ಖಾಸಗಿ ಮತ್ತು ಸರಕಾರಿ (ಕೇಂದ್ರ ಮತ್ತು ರಾಜ್ಯ) ಕಚೇರಿಗಳಿಗೆ ಹಾಜರಾತಿಯನ್ನು ಶೇಕಡಾ 15 ಕ್ಕೆ ನಿಗದಿಪಡಿಸಲಾಗಿದೆ.

ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು "ಅಗತ್ಯವಿರುವ ಕಡಿಮೆ ಸಾಮರ್ಥ್ಯ" ದಲ್ಲಿ ಕೆಲಸ ಮಾಡಬೇಕು ಆದರೆ ಯಾವುದೇ ಸಮಯದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರಬಾರದು.

ವಿವಾಹ ಸಮಾರಂಭಗಳಲ್ಲಿ ಹಾಜರಾತಿಯನ್ನು 25 ಕ್ಕೆ ನಿಗದಿಪಡಿಸಲಾಗಿದೆ. ಈ ಸಮಾರಂಭಗಳನ್ನು "ಒಂದೇ ಸಭಾಂಗಣದಲ್ಲಿ  2 ಗಂಟೆಗಳ ಮೀರಿ ವಿಸ್ತರಿಸಬಾರದು.

ಈ ನಿಯಮವನ್ನು ಉಲ್ಲಂಘಿಸಿದರೆ, 5 0,000 ರೂ. ದಂಡವನ್ನು ವಿಧಿಸಲಾಗುತ್ತದೆ ಎಂದು ರಾಜ್ಯ ಸರಕಾರ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News