ಕೊವ್ಯಾಕ್ಸಿನ್‌ನಿಂದ ದ್ವಿಗುಣ ರೂಪಾಂತರಿತ ವೈರಸ್ ಪ್ರಬೇಧ ತಟಸ್ಥ: ಐಸಿಎಂಆರ್

Update: 2021-04-21 17:55 GMT

ಹೊಸದಿಲ್ಲಿ, ಎ. 19: ಭಾರತ ಉತ್ಪಾದಿತ ಕೋವಿಡ್-19 ಲಸಿಕೆ ಕೊವ್ಯಾಕ್ಸಿನ್ ಸಾರ್ಸ್-ಸಿಒವಿ-2ನ ಹಲವು ವೈರಸ್ ಪ್ರಬೇಧಗಳನ್ನು ತಟಸ್ಥಗೊಳಿಸುತ್ತದೆ ಹಾಗೂ ದ್ವಿಗುಣ ರೂಪಾಂತರಿತ ವೈರಸ್ ಪ್ರಬೇಧಗಳನ್ನು ಕೂಡ ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ ಎಂದು ವೈದ್ಯಕೀಯ ಸಂಶೋಧನೆಯ ಭಾರತೀಯ ಮಂಡಳಿ (ಐಸಿಎಂಆರ್) ಬುಧವಾರ ಹೇಳಿದೆ.

ಭಾರತ ಹಾಗೂ ಜಗತ್ತಿನ ಇತರ ದೇಶಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ತುರ್ತು ಬಳಕೆಯ ಅಧೀಕೃತತೆ ಪಡೆದುಕೊಂಡಿದೆ. ಇನ್ನೂ 60 ದೇಶಗಳು ಈ ಪ್ರಕ್ರಿಯೆಯಲ್ಲಿದೆ. ಸಾರ್ಸ್ ಸಿಒವಿ-2 ವೈರಸ್: ಬಿ.1.1.7 (ಬ್ರಿಟನ್‌ನ ವೈರಸ್ ಪ್ರಬೇಧ ); ಬಿ.1.1.28 (ಬ್ರೆಝಿಲ್ ವೈರಸ್ ಪ್ರಬೇಧ) ಹಾಗೂ ಬಿ.1.351 (ದಕ್ಷಿಣ ಆಫ್ರಿಕಾ ವೈರಸ್ ಪ್ರಬೇಧ)ಗೆ ಸಂಬಂಧಿಸಿದ ವಿವಿದ ಪ್ರಬೇಧದ ವೈರಸ್‌ಗಳನ್ನು ಐಸಿಎಂಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಯಶಸ್ವಿಯಾಗಿ ‘ಐಸೋಲೇಶನ್’ (ಪ್ರತ್ಯೇಕಿಸು) ಹಾಗೂ ‘ಕಲ್ಚರ್’ ಮಾಡಿದೆ.

ಬ್ರಿಟನ್ ಪ್ರಬೇಧದ ಹಾಗೂ ಬ್ರೆಝಿಲ್ ಪ್ರಬೇಧದ ವೈರಸ್‌ಗಳ ವಿರುದ್ಧ ಕೊವ್ಯಾಕ್ಸಿನ್‌ನ ತಟಸ್ಥಗೊಳಿಸುವ ಸಾಮರ್ಥ್ಯವನ್ನು ಐಸಿಎಂಆರ್-ಎನ್‌ಐವಿ ದೃಢಪಡಿಸಿದೆ ಎಂದು ಐಸಿಎಂಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News