ರಸೆಲ್, ಕಮಿನ್ಸ್ ಹೋರಾಟ ವ್ಯರ್ಥ: ಕೊಲ್ಕತ್ತಾ ವಿರುದ್ಧ ಚೆನ್ನೈಗೆ ರೋಚಕ ಜಯ

Update: 2021-04-21 18:58 GMT

ಮುಂಬೈ: ಐಪಿಎಲ್ ನ 15ನೇ ಪಂದ್ಯದಲ್ಲಿ ಚೆನ್ನೈಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 18 ರನ್ ಗಳ ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಡು ಪ್ಲೆಸಿಸ್(95, 60 ಎಸೆತ, 9 ಬೌಂಡರಿ, 4 ಸಿಕ್ಸರ್)ಹಾಗೂ ಋತುರಾಜ್ ಗಾಯಕ್ವಾಡ್(64, 42 ಎಸೆತ, 6 ಬೌಂ.4 ಸಿ.) ಅರ್ಧಶತಕಗಳ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ್ದ ಕೆಕೆಆರ್ ಪ್ಯಾಟ್ ಕಮಿನ್ಸ್(ಔಟಾಗದೆ 66, 34 ಎಸೆತ, 4 ಬೌಂ.6 ಸಿ.), ಆ್ಯಂಡ್ರೆ ರಸೆಲ್ (54, 22 ಎಸೆತ, 3 ಬೌಂ.6 ಸಿ.) ಹಾಗೂ ದಿನೇಶ್ ಕಾರ್ತಿಕ್ (40, 24 ಎಸೆತ, 4 ಬೌಂ.2ಸಿ.)ಬಿರುಸಿನ ಬ್ಯಾಟಿಂಗ್ ಹೊರತಾಗಿಯೂ 19.1 ಓವರ್ ಗಳಲ್ಲಿ 202 ರನ್ ಗೆ ಆಲೌಟಾಯಿತು.

ಕೋಲ್ಕತಾ ಕಳಪೆ ಆರಂಭಕ್ಕೆ ಬೆಲೆ ತೆರಬೇಕಾಯಿತು. ಕೋಲ್ಕತಾ 31 ರನ್ ಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡಿತು.  ರಸೆಲ್, ಕಾರ್ತಿಕ್ ಹಾಗೂ ಕಮಿನ್ಸ್ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದರು.  ದೀಪಕ್ ಚಹಾರ್(4-29) ಹಾಗೂ ಲುಂಗಿ ಗಿಡಿ(3-28) ಕೋಲ್ಕತಾದ ಗೆಲುವಿನ ಆಸೆಗೆ ತಣ್ಣೀರೆರಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News