ಪರಿಹಾರ ಬೇಕು, ಟೊಳ್ಳು ಭಾಷಣ ಬೇಡ: ಪ್ರಧಾನಿ ವಿರುದ್ದ ರಾಹುಲ್ ವಾಗ್ದಾಳಿ

Update: 2021-04-22 06:09 GMT

ಹೊಸದಿಲ್ಲಿ: ಭಾರತ ಎದುರಿಸುತ್ತಿರುವ ಅತ್ಯಂತ ದೊಡ್ಡ ಆರೋಗ್ಯ ಸವಾಲನ್ನು ಸರಕಾರ ನಿಭಾಯಿಸುತ್ತಿರುವ ರೀತಿಯನ್ನು ಗುರುವಾರ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ,  ಟೊಳ್ಳು ಭಾಷಣ ಸಾಕು, ಪರಿಹಾರ ಬೇಕು ಎಂದು ಹೇಳಿದ್ದಾರೆ.

ಮಂಗಳವಾರ ರಾತ್ರಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾಡಿರುವ ಭಾಷಣವನ್ನು ಉಲ್ಲೇಖಿಸಿ ಕೇರಳದ ವಯನಾಡ್ ಸಂಸದ ಟ್ವೀಟರ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
50ರ ವಯಸ್ಸಿನ ರಾಹುಲ್ ಕಳೆದ ವಾರ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಸದ್ಯ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. 

“ನಾನು ಕ್ವಾರಂಟೈನ್ ನಲ್ಲಿದ್ದೇನೆ. ದೇಶಾದ್ಯಂತ ಬರುತ್ತಿರುವ ದುರಂತಮಯ ವರದಿಯನ್ನು ನೋಡುತ್ತಿದ್ದೇನೆ. ಭಾರತ ಕೇವಲ ಕೊರೋನ ವೈರಸ್ ಬಿಕ್ಕಟ್ಟಿನಿಂದ ಮಾತ್ರ ಬಳಲುತ್ತಿಲ್ಲ,  ಸರಕಾರದ ಜನ ವಿರೋಧಿ ನೀತಿಗಳಿಂದಲೂ ಜರ್ಝರಿತವಾಗಿದೆ. ದೇಶಕ್ಕೆ ಟೊಳ್ಳು ಭಾಷಣ..ಅನುಪಯಕ್ತ ಹಬ್ಬದ(ಲಸಿಕೆ ಹಬ್ಬ)ಅಗತ್ಯವಿಲ್ಲ..ಭಾರತಕ್ಕೆ ಪರಿಹಾರದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಲಸಿಕೆ ಅಭಿಯಾನವನ್ನು ಹೆಚ್ಚಿಸಲು ಸರಕಾರವು ಈ ತಿಂಗಳ ಆರಂಭದಲ್ಲಿ 4 ದಿನಗಳ ಕಾಲ ಲಸಿಕಾ ಉತ್ಸವವನ್ನು ಆಚರಿಸಿತ್ತು.  ರಾಹುಲ್ ತಮ್ಮ ಟ್ವೀಟ್ ನಲ್ಲಿ ಈ ಉತ್ಸವವನ್ನು ಉಲ್ಲೇಖಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News