ಭಾರತದಿಂದ ಹೆಚ್ಚುವರಿ ವಿಮಾನಗಳಿಗೆ ಅನುಮತಿ ನಿರಾಕರಿಸಿದ ಬ್ರಿಟನ್ ನ ಹಿಥ್ರೋ ಏರ್ ಪೋರ್ಟ್

Update: 2021-04-22 06:29 GMT
photo: AP

ಲಂಡನ್: ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಅನುಮತಿಸಲು ಬ್ರಿಟನ್ ನ ಹಿಥ್ರೋ ವಿಮಾನ ನಿಲ್ದಾಣ  ನಿರಾಕರಿಸಿದೆ ಎಂದು ವಿಮಾನ ನಿಲ್ದಾಣ ಬುಧವಾರ ತಿಳಿಸಿದೆ. 

ಭಾರತದಲ್ಲಿ ಮೊದಲು ಗುರುತಿಸಲಾಗಿರುವ ರೂಪಾಂತರದ 100ಕ್ಕೂ ಕೊರೋನ ವೈರಸ್ ಪತ್ತೆಯಾದ ಬಳಿಕ ಬ್ರಿಟನ್ ಈ ಕ್ರಮ ಕೈಗೊಂಡಿದೆ. ನಾವು ಭಾರತವನ್ನು ಕೆಂಪುಪಟ್ಟಿಗೆ ಸೇರಿಸುವ ಕಠಿಣ ಆದರೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರರ್ಥ ಬ್ರಿಟನ್ ಅಥವಾ ಐರಿಶ್ ನಿವಾಸಿ ಅಥವಾ ಬ್ರ್ರಿಟಿನ್ ಪ್ರಜೆಯಲ್ಲದವರು ಹಿಂದಿನ 10 ದಿನಗಳಲ್ಲಿ ಭಾರತದಲ್ಲಿದ್ದರೆ ಬ್ರಿಟನ್‍ಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಮ್ಯಾಟ್ ಹ್ಯಾನ್ಕಾಕ್ ಸೋಮವಾರ ತಿಳಿಸಿದ್ದಾರೆ.

ಭಾರತದಿಂದ ಹೆಚ್ಚುವರಿ ವಿಮಾನಗಳನ್ನು ಅನುಮತಿಸಲು ಹಿಥ್ರೋ ವಿಮಾನ ನಿಲ್ದಾಣವು ನಿರಾಕರಿಸಿದೆ ಎಂದು ಬಿಬಿಸಿ ಈ ಹಿಂದೆ ವರದಿ ಮಾಡಿತ್ತು. ಪಾಸ್‍ಪೋರ್ಟ್ ನಿಯಂತ್ರಣದಲ್ಲಿ ಸರತಿ ಸಾಲುಗಳ ಬಗ್ಗೆ ಇರುವ ಆತಂಕದಿಂದಾಗಿ ವಿಮಾನ ಯಾನ ಸಂಸ್ಥೆಗಳ ಕೋರಿಕೆಗಳನ್ನು ತಿರಸ್ಕರಿಸಲಾಗಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News