ದಿಲ್ಲಿಯಲ್ಲಿ ಕೋವಿಡ್ ರೋಗಿಗಳಿಂದ ಆ್ಯಂಬುಲೆನ್ಸ್ ಗೆ ಭಾರೀ ಬೇಡಿಕೆ

Update: 2021-04-22 11:39 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್-19 ರೋಗಿಗಳಿಂದ 2,500 ಕ್ಕೂ ಹೆಚ್ಚು ಕರೆಗಳನ್ನು ಆಂಬ್ಯುಲೆನ್ಸ್‌ಗಳಿಗೆ ರವಾನಿಸಲಾಗಿದೆ ಎಂದು ಸರಕಾರ ಸಂಗ್ರಹಿಸಿದ ಸಂಖ್ಯೆಗಳು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಎತ್ತಿ ತೋರಿಸುತ್ತವೆ.

ಕಳೆದ ಒಂದು ವಾರದಲ್ಲಿ 17,924 ಕರೆಗಳ ಸಂಚಿತ ಅಂಕಿ ಅಂಶವು ರೋಗಿಗಳು ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಮಾಡಿದ ಕರೆಗಳನ್ನು ಒಳಗೊಂಡಿಲ್ಲ.

ದತ್ತಾಂಶಗಳ ಪ್ರಕಾರ, ಕಳೆದ ವಾರದಿಂದ ನಗರದಲ್ಲಿ ಪ್ರತಿದಿನ ಕೊರೋನವೈರಸ್ ರೋಗಿಗಳಿಂದ ಕನಿಷ್ಠ 2,560 ಕರೆಗಳನ್ನು ಆಂಬ್ಯುಲೆನ್ಸ್‌ಗಳಿಗೆ ರವಾನಿಸಲಾಗುತ್ತಿತ್ತು. ಏಕೆಂದರೆ ದಿಲ್ಲಿಯಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ದಿಲ್ಲಿಯಲ್ಲಿ ಬುಧವಾರ 24,638 ಹೊಸ ಕೋವಿಡ್-19 ಪ್ರಕರಣಗಳು ಹಾಗೂ 249 ಸಾವುಗಳು ದಾಖಲಾಗಿದ್ದರೆ, ಪಾಸಿಟಿವಿಟಿ ಪ್ರಮಾಣವು ಶೇಕಡಾ 31.28 ರಷ್ಟಿದೆ, ಅಂದರೆ ನಗರದಲ್ಲಿ ಆಮ್ಲಜನಕ ಮತ್ತು ಆಸ್ಪತ್ರೆ ಹಾಸಿಗೆಗಳ ಬಗ್ಗೆ ಹೆಚ್ಚುತ್ತಿರುವ ಕೂಗು ಮಧ್ಯೆ, ಪ್ರತಿ ಮೂರನೇ ಮಾದರಿಯು ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News