ಮಂಗಳನ ಅಂಗಳದಲ್ಲಿ ಪ್ರಥಮ ಬಾರಿಗೆ ಆಕ್ಸಿಜನ್ ಉತ್ಪತ್ತಿ ಮಾಡಿದ ನಾಸಾದ ಪರ್ಸೀವರೆನ್ಸ್

Update: 2021-04-22 12:04 GMT

ಬೆಂಗಳೂರು: ನಾಸಾದ ಪರ್ಸೀವರೆನ್ಸ್ ರೋವರ್ ಮಂಗಳ ಗ್ರಹದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಬಳಸಿ ಯಶಸ್ವಿಯಾಗಿ ಆಮ್ಲಜನಕ ತಯಾರಿಸಿದೆ. ಈ ಪ್ರಯೋಗವನ್ನು ಎಪ್ರಿಲ್ 20ರಂದು ಮಾರ್ಸ್ ಆಕ್ಸಿಜನ್ ಇನ್-ಸಿಟು ರಿಸೋರ್ಸ್ ಯುಟಿಲೈಝೇಶನ್ ಇಕ್ವಿಪ್ಮೆಂಟ್ ನಡೆಸಿತ್ತು. ಟೋಸ್ಟರ್ ಗಾತ್ರದ ಈ  ಉಪಕರಣದ ಯಶಸ್ಸು ದೊಡ್ಡ ಸಾಧನೆಯೆಂದೇ ಬಿಂಬಿಸಲಾಗಿದೆ.

ಈ ಯಶಸ್ವೀ ಪ್ರಯೋಗ ಮುಂದೆ  ಮಂಗಳನ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಉತ್ಪಾದನೆಗೆ ನಾಂದಿಯಾಗುವ ಸಾಧ್ಯತೆಯಿದೆಯೆನ್ನಲಾಗಿದೆ.

ಮಾರ್ಸ್ ಆಕ್ಸಿಜನ್ ಇನ್-ಸಿಟು ರಿಸೋರ್ಸ್ ಯುಟಿಲೈಝೇಶನ್ ಇಕ್ವಿಪ್ಮೆಂಟ್  ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿ ಅದನ್ನು ಕಂಪ್ರೆಸ್ ಮಾಡಿ ಫಿಲ್ಟರ್ ಮಾಡಿ ಅನಿಲದಿಂದ ಎಲ್ಲಾ ಮಾಲಿನ್ಯಕಾರಕಗಳನ್ನು ಹೊರಹಾಕುತ್ತಿದೆ. ಈ ಅನಿಲಕ್ಕೆ ನಂತರ ಶಾಖ ನೀಡಿ ಆಕ್ಸಿಜನ್ ಅಣುಗಳನ್ನು ಕಾರ್ಬನ್ ಡೈಆಕ್ಸೈಡ್  ಕಣಗಳಿಂದ ಪ್ರತ್ಯೇಕಿಸಿದಾಗ ಕಾರ್ಬನ್ ಮೊನೋಕ್ಸೈಡ್ ಆಗುತ್ತದೆ. ಸುಮಾರು 800 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಈ ಚಿನ್ನ ಲೇಪಿತ ಇನ್ಸುಲೇಟೆಡ್ ಉಪಕರಣ ಅಂತಿಮವಾಗಿ 5.4 ಗ್ರಾಂ ಆಕ್ಸಿಜನ್ ಅನ್ನು ಒಂದು ಗಂಟೆಯಲ್ಲಿ ಉತ್ಪತ್ತಿ ಮಾಡಿದೆ.

ಮುಂದಿನ ಹಂತಗಳಲ್ಲಿ ಈ ಉಪಕರಣ ಪ್ರತಿ ಗಂಟೆಗೆ 10ರಿಂದ 12 ಗ್ರಾಂ ಆಕ್ಸಿಜನ್ ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News