×
Ad

ಕೋವಿಡ್ ರೋಗಿಯ ಮೃತದೇಹ ತಮಗೆ ಹಸ್ತಾಂತರಿಸಿಲ್ಲ: ಮಧ್ಯಪ್ರದೇಶದ ಕುಟುಂಬವೊಂದರ ಆರೋಪ

Update: 2021-04-23 17:44 IST
ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಕೊರೋನವೈರಸ್ ವಿರುದ್ಧ ಹೋರಾಟದಲ್ಲಿ ಸೋತಿರುವ ಕುಟುಂಬವೊಂದು ತಮ್ಮ ಪ್ರೀತಿಪಾತ್ರರ ಶವಗಳನ್ನು ತಮಗೆ ಹಸ್ತಾಂತರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮೃತ ವ್ಯಕ್ತಿಯ ಕುಟುಂಬಕ್ಕೆ ಮಾಹಿತಿ ನೀಡದೆ ಆಸ್ಪತ್ರೆಯ ಅಧಿಕಾರಿಗಳು ಶವವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯ ರಾಜಧಾನಿ ಭೋಪಾಲ್‌ನಿಂದ 57 ಕಿಲೋಮೀಟರ್ ದೂರದಲ್ಲಿರುವ ವಿದಿಶಾ ಜಿಲ್ಲಾ ಆಸ್ಪತ್ರೆಯಲ್ಲಿ ಸೆರೆಯಾಗಿರುವ ವೀಡಿಯೊವೊಂದು ಕೋವಿಡ್ ನಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಎದುರಿಸುತ್ತಿರುವ ಭೀಕರತೆಯನ್ನು ವಿವರಿಸುತ್ತಿದೆ.

ವೀಡಿಯೊದಲ್ಲಿ, ಕೋವಿಡ್ ಬಲಿಪಶುವಿನ ದೇಹವನ್ನು ಹೊತ್ತ ಆ್ಯಂಬುಲೆನ್ಸ್ ಆಸ್ಪತ್ರೆಯಿಂದ ಹೊರಬರುವುದು ಕಂಡುಬರುತ್ತದೆ. ಅದು ಗೇಟ್ ದಾಟಿ ತಿರುವಿನಲ್ಲಿ ಹಾದುಹೋಗುವಂತೆಯೇ  ಮೃತದೇಹವನ್ನು ಆ್ಯಂಬುಲೆನ್ಸ್ ನಿಂದ ರಸ್ತೆಗೆ ಎಸೆಯಲಾಗುತ್ತದೆ. ಆಗ ವಾಹನದ ಚಾಲಕ ಭಯಭೀತನಾಗಿ ಆಂಬ್ಯುಲೆನ್ಸ್ ಅನ್ನು ನಿಲ್ಲಿಸುತ್ತಿದ್ದಾನೆ. ಆ್ಯಂಬುಲೆನ್ಸ್‌ನ ಒಳಗಿನಿಂದ ಪಿಪಿಇ ಧರಿಸಿದ ವ್ಯಕ್ತಿ ನೋಡುತ್ತಾ ನಿಂತಿರುವಾಗ ಒಂದಿಬ್ಬರು ಪುರುಷರು ಅಲ್ಲಿಗೆ ಧಾವಿಸಿ ಬರುವುದು ಕಾಣಿಸುತ್ತದೆ.

ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ 12,384 ಕೋವಿಡ್ -19 ಪ್ರಕರಣಗಳು ಮತ್ತು 75 ಸಾವುಗಳು ವರದಿಯಾಗಿವೆ. ರಾಜ್ಯದ ಒಟ್ಟು ಕೇಸ್ ಈಗ 4.59 ಲಕ್ಷ ಮೀರಿದೆ, ರಾಜ್ಯದ ಅನೇಕ ಜಿಲ್ಲೆಗಳು ತೀವ್ರ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿವೆ ಮತ್ತು ಇದರ ಪರಿಣಾಮವಾಗಿ ಅನೇಕ ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News