×
Ad

ನಿಮ್ಮನ್ನು ಅಧಿಕಾರದಿಂದ ಕಿತ್ತೆಸೆದರೆ ಸಂಪೂರ್ಣ ದೇಶಕ್ಕೆ ಲಸಿಕೆ ನೀಡಿದಂತಾಗುತ್ತದೆ: ನಟ ಸಿದ್ದಾರ್ಥ್‌

Update: 2021-04-24 15:24 IST

ಹೊಸದಿಲ್ಲಿ: ದೇಶದಾದ್ಯಂತ ಕೊರೋನ ಸೋಂಕಿತರ ಪರಿಸ್ಥಿತಿಯು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ದೈನಂದಿನ 3.5ಲಕ್ಷಕಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹಲವಾರು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗಿದ್ದು, ಸಾಮೂಹಿಕವಾಗಿ ರೋಗಿಗಳು ಮೃತಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ನಟ ಸಿದ್ದಾರ್ಥ್‌ ಕಿಡಿಕಾರಿದ್ದಾರೆ. 

ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅವರು, "ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯುವ ದಿನ ಈ ಸಂಪೂರ್ಣ ದೇಶ  ಖಂಡಿತಾ ಲಸಿಕೆ ಪಡೆದಂತಾಗುತ್ತದೆ. ಇದು ಹತ್ತಿರವಾಗುತ್ತಿದೆ. ಈ ಟ್ವೀಟ್‌ ಅನ್ನು ನೆನಪಿಸಲಿಕ್ಕೋಸ್ಕರವಾದರೂ ನಾವು ಇಲ್ಲೇ ಇರುತ್ತೇವೆ" ಎಂದು ಸಿದ್ದಾರ್ಥ್‌ ಟ್ವೀಟ್‌ ಮಾಡಿದ್ದಾರೆ. ತಮ್ಮ ಟ್ವೀಟ್‌ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿಯ "ನಾವು ಅಧಿಕಾರಕೆ ಬಂದರೆ ಪಶ್ಚಿಮ ಬಂಗಾಳದ ಜನತೆಗೆ ಉಚಿತ ಕೋವಿಡ್‌ ಲಸಿಕೆ ನೀಡುತ್ತೇವೆ" ಎಂಬ ಆಶ್ವಾಸನೆಯನ್ನೂ ಸಿದ್ದಾರ್ಥ್‌ ಉಲ್ಲೇಖಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News