"ಆಕ್ಸಿಜನ್‌ ಉಳಿದಿದ್ದರೆ ನಮಗೆ ಕಳುಹಿಸಿ": ಇತರ ರಾಜ್ಯಗಳಿಗೆ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮನವಿ

Update: 2021-04-24 15:43 GMT

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ರವರು ದಿಲ್ಲಿಯಲ್ಲಿ ಆಕ್ಸಿಜನ್‌ ಅಲಭ್ಯತೆಯ ಕುರಿತಾದಂತೆ ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಹಾಯ ಯಾಚಿಸಿದ್ದಾರೆ. ನಿಮ್ಮ ರಾಜ್ಯದಲ್ಲಿ ಹೆಚ್ಚುವರಿ ಆಮ್ಲಜನಕಗಳನ್ನು ದಿಲ್ಲಿಗೆ ಕಳುಹಿಸಿಕೊಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. 

"ನಾನು ಎಲ್ಲಾ ಮುಖ್ಯಮಂತ್ರಿಗಳಿಗೆ, ನಿಮ್ಮ ರಾಜ್ಯದಲ್ಲಿನ ಹೆಚ್ಚುವರಿ ಆಮ್ಲಜನಕವನ್ನು ದಿಲ್ಲಿಗೆ ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಕೇಂದ್ರ ಸರಕಾರವೂ ನಮಗೆ ಸಹಾಯ ಮಾಡುತ್ತಿದೆ. ಕೊರೋನದ ತೀವ್ರತೆಯು ನಮ್ಮಲ್ಲಿರುವ ಎಲ್ಲ ಸಂಪನ್ಮೂಲಗಳು ಅಸಮರ್ಪಕ ಎಂಬುವುದನ್ನು ಸಾಬೀತುಪಡಿಸಿದೆ" ಎಂದು ಅವರು ಟ್ವಿಟರ್‌ ನಲ್ಲಿ ಬರೆದಿದ್ದಾರೆ.

"ಕಳೆದ ಕೆಲವು ದಿನಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡ ಕಾರಣದಿಂದಾಗಿ ದಿಲ್ಲಿಯಲ್ಲಿ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿಲ್ಲ. ನಗರದ ಅನೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗಿದೆ ಎಂದು ರಾಜ್ಯಗಳಿಗೆ ಕೇಜ್ರಿವಾಲ್‌ ಮಾಹಿತಿ ನೀಡಿದ್ದಾರೆ. ನಮ್ಮ ಅವಶ್ಯಕತೆಗಿಂತ ಕಡಿಮೆ ಪ್ರಮಾಣದಲ್ಲಿ ದಿಲ್ಲಿಗೆ ದೈಂದಿನ ಆಕ್ಸಿಜನ್‌ ಪೂರೈಕೆಯಾಗುತ್ತಿರುವುದು ದುಃಖಕರ ಸಂಗತಿ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News