×
Ad

ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದ ಕನ್ನಡ ಟಿವಿ ಚಾನೆಲ್‌ ನಿರೂಪಕ: ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆ

Update: 2021-04-25 18:48 IST

ಹೊಸದಿಲ್ಲಿ: ಕೊರೋನ ವೈರಸ್‌ ಪರಿಸ್ಥಿತಿಯನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ನಿಭಾಯಿಸುತ್ತಿರುವ ರೀತಿಯ ಕುರಿತಾದಂತೆ ಕನ್ನಡ ಖಾಸಗಿ ಸುದ್ದಿ ಚಾನೆಲ್‌ ನ ನಿರೂಪಕನೋರ್ವ ಸರಕಾರಕ್ಕೆ ಹಿಗ್ಗಾಮುಗ್ಗಾ ಛೀಮಾರಿ ಹಾಕಿದ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

ಈ ವೀಡಿಯೋವನ್ನು ಆಂಗ್ಲ ಮಾಧ್ಯಮಗಳು ಸೇರಿದಂತೆ ಹಲವು ಪ್ರಮು ಮಾಧ್ಯಮಗಳು ಪ್ರಕಟಿಸಿವೆ. ದೈನಂದಿನ ಕೋವಿಡ್‌ ಪ್ರಕರಣಗಳು ಮೂರು ಲಕ್ಷ ದಾಟಿದ್ದು, ಆದರೆ ಪ್ರಧಾನಿ ನರೇಂದ್ರ ಮೋದಿಯವರು ಜನತೆಯ ಮುಂದಿಡುತ್ತಿರುವ ʼಜುಮ್ಲಾʼಗಳ ಕುರಿತಾದಂತೆ ನಿರೂಪಕ ಹರಿಹಾಯ್ದಿದ್ದಾರೆ.

ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಶೇರ್‌ ಮಾಡಿರುವ ಪತ್ರಕರ್ತ ರಾಧಾಕೃಷ್ಣನ್‌ ಆರ್.ಕೆ, "ನನಗೆ ಕನ್ನಡ ಅರ್ಥವಾಗುವುದಿಲ್ಲ. ಆದರೆ,ಇದು ಯಾವುದಕ್ಕೆ ಸಂಬಂಧಿಸಿದೆ ಎಂದು ತಿಳಿಯಲು ನಿಮಗೆ ಭಾಷೆಯ ಅಗತ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News