×
Ad

ಮಿಥುನ್ ಚಕ್ರವರ್ತಿ ಡಿಸ್ಕೊ ಡ್ಯಾನ್ಸ್ ಶೈಲಿಯಲ್ಲಿ ಮಾಸ್ಕ್ ಧರಿಸಿದ್ದಾರೆ: ಟಿಎಂಸಿ ವ್ಯಂಗ್ಯ

Update: 2021-04-26 12:08 IST

ಕೋಲ್ಕತಾ: ವಿಧಾನಸಭಾ ಚುನಾವಣೆಯ ಅಂತಿಮ ಹಂತ ತಲುಪಿರುವಾಗ ಬಿಜೆಪಿಯ ಸ್ಟಾರ್ ಪ್ರಚಾರಕ ಮಿಥುನ್ ಚಕ್ರವರ್ತಿ ಕಳೆದ ವಾರಗಳಲ್ಲಿ ಬಂಗಾಳದಾದ್ಯಂತ ವ್ಯಾಪಕವಾಗಿ ಪ್ರಚಾರ ನಡೆಸುತ್ತಿದ್ದಾರೆ. ರಾಜೀವ್ ಬ್ಯಾನರ್ಜಿ ಅವರೊಂದಿಗಿನ ಅಂತಹ  ಒಂದು ಪ್ರಚಾರ ಅಭಿಯಾನದಲ್ಲಿ ಮಿಥುನ್ ಚಕ್ರವರ್ತಿ ತನ್ನ ಮಾಸ್ಕನ್ನು ತಪ್ಪಾದ ಶೈಲಿಯಲ್ಲಿ ಧರಿಸಿದ್ದು ಕಂಡುಬಂದಿದೆ.

ಜನಪ್ರಿಯ ‘ಖೇಲಾ ಹೋಬ್’ಗೀತೆಯನ್ನು ಬರೆದು ಸಂಯೋಜಿಸಿದ ಟಿಎಂಸಿ ಯುವ ಮುಖಂಡ ದೇಬಾಂಗ್ಶು ಭಟ್ಟಾಚಾರ್ಯ ಅವರು ಹಂಚಿಕೊಂಡ ಫೋಟೊದಲ್ಲಿ ಮಿಥುನ್ ಚಕ್ರವರ್ತಿ ಅವರು ಮೂಗಿನ ಮೇಲೆ ನೀಲಿ ಬಣ್ಣದ ಮಾಸ್ಕ್ ಧರಿಸಿರುವುದು ಕಂಡುಬಂದಿದೆ. ಮಾಸ್ಕ್ ಅವರ ಬಾಯನ್ನು ಮುಚ್ಚದೆ ಒಂದು ಕಣ್ಣಿಗೆ ಮುಚ್ಚಿಕೊಂಡಿತ್ತು.

“ಡಿಸ್ಕೋ ಡ್ಯಾನ್ಸ್ ಶೈಲಿಯೊಂದಿಗೆ ಮುಖವಾಡ(ಮಾಸ್ಕ್)ಹೇಗೆ ಧರಿಸಬೇಕೆಂದು ಮಿಥುನ್ ದಾದಾ ಭಾರತಕ್ಕೆ ಕಲಿಸುತ್ತಿದ್ದಾರೆ ಎಂದು ದೇಬಾಂಗ್ಳು ಭಟ್ಟಾಚಾರ್ಯ ವ್ಯಂಗ್ಯವಾಡಿದ್ದಾರೆ.

ಮಿಥುನ್ ಚಕ್ರವರ್ತಿ ಹಾಗೂ ಮಾಜಿ ಟಿಎಂಸಿ ನಾಯಕ ರಾಜೀವ್ ಬ್ಯಾನರ್ಜಿ ಅವರು ರವಿವಾರ ಕೋಲ್ಕತಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಈ ಛಾಯಾಚಿತ್ರವನ್ನು ತೆಗೆಯಲಾಗಿದೆ. ರಾಜೀವ್ ತಮ್ಮ ಫೇಸ್ ಬುಕ್ ಹಾಗೂ ಪ್ರೊಫೈಲ್ ಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News