×
Ad

ಮಿಝೋರಾಂ: ಪಟ್ಟಣ, ಹಳ್ಳಿಗಳಿಗೂ ಹರಡಿದ ಕಾಡಿನ ಬೆಂಕಿ

Update: 2021-04-26 22:07 IST

ಗುವಾಹಟಿ: ಕಳೆದ 32 ಗಂಟೆಗಳಿಂದ ಹೆಚ್ಚು ಸಮಯದಿಂದ ದಕ್ಷಿಣ ಮಿಝೋರಾಂ ಬೆಟ್ಟಗಳಲ್ಲಿ ಕಾಡಿನ ಬೆಂಕಿ ಉಲ್ಬಣಗೊಳ್ಳುತ್ತಿದ್ದು, ಬೆಂಕಿಯು ಎರಡು ನೆರೆಯ ಜಿಲ್ಲೆಗಳಾದ ಲುಂಗ್ಲೆ ಹಾಗೂ ಲಾಂಗ್ಟೈ ಪಟ್ಟಣಗಳು ಹಾಗೂ ಹಳ್ಳಿಗಳಿಗೆ ಹರಡಿದೆ.

ಅಸ್ಸಾಂ ರೈಫಲ್ಸ್ ಹಾಗೂ ಗಡಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಸ್ವಯಂ ಸೇವಕ ಗುಂಪುಗಳ ಸಹಾಯದಿಂದ ರಾಜ್ಯ ಸರಕಾರದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ಪಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಾರ ಸಂಜೆಯೂ ಬೆಂಕಿ ಉರಿಯುತ್ತಲೇ ಇದ್ದ ಕಾರಣ ಮಿಝೋರಾಂ ಸರಕಾರದ ಕೋರಿಕೆಯ ಮೇರೆಗೆ ಭಾರತೀಯ ವಾಯುಪಡೆಯು ಎರಡು ಮಿಗ್-17 ವಿ 5 ಹೆಲಿಕಾಪ್ಟರ್ ಗಳನ್ನು ನಿಯೋಜಿಸಿ ಬೆಂಕಿಯನ್ನು ನಿಯಂತ್ರಿಸಲು ವಿಶೇಷ ಬಾಂಬಿ ಬಕೆಟ್ ಗಳನ್ನು ಇಟ್ಟುಕೊಂಡಿದೆ.

ಲುಂಗ್ಲೆ ಪಟ್ಟಣದ ಸಮೀಪವಿರುವ ಕಾಡುಬೆಟ್ಟಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ರವಿವಾರ ಇದು ಲುಂಗ್ಲೆ ಪಟ್ಟಣದ 10 ಗ್ರಾಮ ಪರಿಷತ್ತು ಪ್ರದೇಶಗಳ ಮೇಲೆ ಮಾತ್ರವಲ್ಲ ಲುಂಗ್ಲಿ ಪಟ್ಟಣಕ್ಕೂ ಹಬ್ಬಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News