×
Ad

ಬ್ಯಾಂಕ್‌ಗಳ ವಿಲೀನಕರಣ: ಗ್ರಾಹಕರ ತೃಪ್ತಿ ಸಮೀಕ್ಷೆ ನಡೆಸಲು ಆರ್‌ಬಿಐ ನಿರ್ಧಾರ

Update: 2021-04-26 23:23 IST

ಮುಂಬೈ, ಎ.26: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದ ಗ್ರಾಹಕರಿಗೆ ಲಭಿಸುವ ಬ್ಯಾಂಕಿಂಗ್ ಸೇವೆಗಳ ಮೇಲಾಗುವ ಪರಿಣಾಮಗಳ ಬಗ್ಗೆ ‘ಗ್ರಾಹಕರ ತೃಪ್ತಿ ಸಮೀಕ್ಷೆ’ ನಡೆಸಲು ರಿಸರ್ವ್ ಬ್ಯಾಂಕ್ ಇಂಡಿಯಾ(ಆರ್‌ಬಿಐ) ನಿರ್ಧರಿಸಿದೆ. 21 ರಾಜ್ಯಗಳ 20,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ.

ಗ್ರಾಹಕರ ಸೇವೆಯ ವಿಷಯದಲ್ಲಿ ವಿಲೀನೀಕರಣ ಸಕಾರಾತ್ಮಕವಾಗಿದೆಯೇ ಎಂಬ ಪ್ರಶ್ನೆ ಸಹಿತ 22 ಪ್ರಶ್ನೆಗಳಿಗೆ - ದೃಢವಾಗಿ ಒಪ್ಪುತ್ತೇನೆ, ಒಪ್ಪುತ್ತೇನೆ, ತಟಸ್ಥ, ಒಪ್ಪುವುದಿಲ್ಲ, ದೃಢವಾಗಿ ಒಪ್ಪುವುದಿಲ್ಲ ಎಂಬ ಆಯ್ಕೆಗೆ ಗುರುತು ಹಾಕಬೇಕಾಗುತ್ತದೆ. ಈ ಪ್ರಶ್ನೆಗಳಲ್ಲಿ 4 ಪ್ರಶ್ನೆಗಳು 2019 ಮತ್ತು 2020ರಲ್ಲಿ ಇತರ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡ ಬ್ಯಾಂಕ್‌ಗಳ ಗ್ರಾಹಕರ ಕುಂದುಕೊರತೆಗೆ ಸಂಬಂಧಿಸಿದ್ದಾಗಿದೆ.

ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್‌ಗಳು ಬ್ಯಾಂಕ್ ಆಫ್ ಬರೋಡಾದೊಂದಿಗೆ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ, ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನೊಂದಿಗೆ, ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್‌ನೊಂದಿಗೆ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್‌ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ, ಲಕ್ಷ್ಮೀವಿಲಾಸ ಬ್ಯಾಂಕ್ ಡಿಬಿಎಸ್ ಬ್ಯಾಂಕ್‌ನೊಂದಿಗೆ ವಿಲೀನವಾಗಿವೆ. ‘ವಿಲೀನದ ಬಳಿಕ ಬ್ಯಾಂಕ್‌ಗಳ ಸೇವೆಗೆ ಸಂಬಂಧಿಸಿ ನನಗೆ ಯಾವುದೇ ಸಮಸ್ಯೆಯಾಗಿಲ್ಲ, ಈ ಕೆಳಗಿನ ವಿಷಯದಲ್ಲಿ ಸಮಸ್ಯೆಯಾಗಿದೆ’ ಇತ್ಯಾದಿ ಪ್ರಶ್ನೆಗಳಿಗೆ ಗ್ರಾಹಕರು ಉತ್ತರಿಸಬೇಕಿದೆ.

ಸಮೀಕ್ಷೆ ನಡೆಸಲು ಆಸಕ್ತರಿಂದ ಕೊಟೇಷನ್ ಆಹ್ವಾನಿಸಲಾಗಿದೆ. ಸಮೀಕ್ಷೆಗೆ ಒಳಪಡುವ ಗ್ರಾಹಕರ ಸಂಪರ್ಕ ಸಂಖ್ಯೆ ಹಾಗೂ ಬ್ಯಾಂಕ್‌ಗಳ ಶಾಖೆಯ ವಿವರವನ್ನು ಒದಗಿಸಲಾಗುವುದು ಎಂದು ಆರ್‌ಬಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News