×
Ad

ಭಾರತ ಸೇರಿದಂತೆ 6 ಮಹಿಳಾ ಕ್ರಿಕೆಟ್ ತಂಡಗಳು ತೇರ್ಗಡೆ

Update: 2021-04-27 10:34 IST
ಹರ್ಮನ್‌ಪ್ರೀತ್ ಕೌರ್

ದುಬೈ: 2022ರ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಭಾರತ ಸೇರಿದಂತೆ ಆರು ದೇಶಗಳ ತಂಡಗಳು ಅರ್ಹತೆ ಗಿಟ್ಟಿಸಿಕೊಂಡಿವೆೆ.

ಅತಿಥೇಯ ಇಂಗ್ಲೆಂಡ್ ತಂಡದೊಂದಿಗೆ ಆಸ್ಟ್ರೇಲಿಯ, ಭಾರತ, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ಮಹಿಳಾ ಕ್ರಿಕೆಟ್ ತಂಡಗಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಡುವ ಅರ್ಹತೆ ಪಡೆದಿದೆ.

ಎಪ್ರಿಲ್ 1ರಂದು ಪ್ರಕಟಗೊಂಡ ಐಸಿಸಿ ತಂಡದ ಶ್ರೇಯಾಂಕದ ಆಧಾರದ ಅರ್ಹತೆಯನ್ನು ಪಡೆದುಕೊಂಡಿವೆ. ಕೆರಿಬಿಯನ್‌ನಿಂದ ಇನ್ನೊಂದು ತಂಡ ಪ್ರವೇಶ ಪಡೆಯಲಿದೆ. ಕೊನೆಯ ತಂಡವನ್ನು 20 ಜನವರಿ 2022 ರೊಳಗೆ ನಡೆಯಲಿರುವ ಅರ್ಹತಾ ಪಂದ್ಯಾವಳಿಯ ಮೂಲಕ ನಿರ್ಧರಿಸಲಾಗುವುದು ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೋಮವಾರ ಪ್ರಕಟನೆೆಯಲ್ಲಿ ತಿಳಿಸಿದೆ.

ಕಾಮನ್ವೆಲ್ತ್ ಕ್ರೀಡಾಕೂಟದ 22 ಆವೃತ್ತಿಗಳಲ್ಲಿ ಎರಡನೇ ಬಾರಿಗೆ ಕ್ರಿಕೆಟ್ ಸೇರ್ಪಡೆಗೊಂಡಿದೆ. 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪುರುಷರ ಏಕದಿನ ಕ್ರಿಕೆಟ್ ತಂಡ ಸೇರ್ಪಡೆಗೊಂಡಿತ್ತು. ಈ ಕೂಟದಲ್ಲಿ ದಕ್ಷಿಣ ಆಫ್ರಿಕಾ ಜಯ ಗಳಿಸಿತ್ತು.

 ಕಾಮನ್ವೆಲ್ತ್ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಟಿಕೆಟ್‌ಗಳು ಈ ವರ್ಷದ ಕೊನೆಯಲ್ಲಿ ಲಭ್ಯವಾಗಲಿವೆ. ‘‘ಭಾರತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಥಾನ ಪಡೆದಿರುವುದು ದೃಢಪಟ್ಟಿದೆ. ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ನಡೆದ ಐಸಿಸಿ ಮಹಿಳಾ ಟ್ವೆಂಟಿ -20 ವಿಶ್ವಕಪ್ ಫೈನಲ್ ಪಂದ್ಯವನ್ನು ಮುಗಿಸಿದ ನಂತರ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿದ್ದೇವೆ’’ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

 ಕ್ರಿಕೆಟ್ ಎಂಬುದು ಕಾಮನ್ವೆಲ್ತ್ ಗೆ ಸಮಾನಾರ್ಥಕವಾದ ಕ್ರೀಡೆಯಾಗಿದ್ದು, ಮತ್ತೊಮ್ಮೆ ಕ್ರಿಕೆಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಯೋಜನೆ ಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News