ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ರೋಚಕ ಗೆಲುವು: ಮತ್ತೆ ಅಗ್ರಸ್ಥಾನಕ್ಕೇರಿದ ಕೊಹ್ಲಿ ಪಡೆ

Update: 2021-04-27 17:58 GMT

ದಿಲ್ಲಿ, ಎ.27: ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 1 ರನ್ನಿನಿಂದ ಜಯ ಗಳಿಸಿದ್ದು, ಈ ಗೆಲುವಿನ ಮೂಲಕ ಮತ್ತೆ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತ್ತು. ಡಿವಿಲಿಯರ್ಸ್ 75, ಪಾಟೀದಾರ್ 31 ರನ್ ಗಳಿಸಿದ್ದರು.

172 ರನ್ ಗಳ ಗುರಿ ಬೆನ್ನತ್ತಿದ ದಿಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 170 ರನ್ ಗಳಿಸಲಷ್ಟೇ ಶಕ್ತವಾಗಿ 1 ರನ್ ನಿಂದ ಸೋಲನುಭವಿಸಿತು.

ತಂಡದ ಪರ ನಾಯಕ ಪಂತ್ 58, ಹೆಟ್ಮೈರ್ 53 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News