×
Ad

ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿಯೇ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಯುವಕ: ಫೋಟೊ ವೈರಲ್

Update: 2021-04-28 15:42 IST

ಭುಬನೇಶ್ವರ್: ಒಡಿಶಾದ ಆಸ್ಪತ್ರೆಯಲ್ಲಿ  ಕೋವಿಡ್ ಚಿಕಿತ್ಸೆಗೆ ದಾಖಲಾಗಿರುವ ವ್ಯಕ್ತಿಯೊಬ್ಬರು ಅಲ್ಲಿಯೇ ಚಾರ್ಟರ್ಡ್ ಅಕೌಂಟೆಂಟ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಚಿತ್ರವನ್ನು ಟ್ವಿಟ್ಟರ್‍ನಲ್ಲಿ ಐಎಎಸ್ ಅಧಿಕಾರಿ ವಿಜಯ್ ಕುಲಂಗೆ ಶೇರ್ ಮಾಡಿದ್ದಾರೆ.

ಆಸ್ಪತ್ರೆಯ ಬೆಡ್ ಮೇಲೆ ಪುಸ್ತಕಗಳು ಮತ್ತು ಕ್ಯಾಲ್ಕುಲೇಟರ್ ಇರಿಸಿ  ಆತ ತಯಾರಿ ನಡೆಸುತ್ತಿರುವುದು ಚಿತ್ರದಲ್ಲಿ ಕಾಣಿಸುತ್ತದ್ದು ಈ ಚಿತ್ರ ವೈರಲ್ ಆಗಿದೆ.

ಇತ್ತೀಚೆಗೆ ಗಂಜಮ್ ಜಿಲ್ಲಾ ಕಲೆಕ್ಟರ್ ಹಾಗೂ ಮ್ಯಾಜಿಸ್ಟ್ರೇಟ್ ಆಗಿರುವ ಕುಲಂಗೆ ಆತ ದಾಖಲಾಗಿರುವ ಬೆಹ್ರಾಂಪುರ್ ಎಂಕೆಸಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ ಈ ಫೋಟೋ ತೆಗೆಯಲಾಗಿದೆ.

ಮಾಸ್ಕ್ ಹಾಗೂ ಕನ್ನಡಕ ಧರಿಸಿದ್ದ ಆತ ಅತ್ಯಂತ ಶ್ರದ್ಧೆಯಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ಕುಲಂಗೆ ಶ್ಲಾಘಿಸಿದ್ದಾರೆ. ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಂದಿ ಲೈಕ್ ನೀಡಿದ್ದಾರೆ. ಅತ್ಯಂತ ಕಠಿಣ ಎಂದು ತಿಳಿಯಲಾಗಿರುವ ಸಿಎ ಪರೀಕ್ಷೆಗೆ ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿರುವಾಗಲೇ ತಯಾರಿ ನಡೆಸುತ್ತಿರುವ ಆತನ ಆತ್ಮವಿಶ್ವಾಸವನ್ನು ಎಲ್ಲರೂ ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News