ಕುಂಭಮೇಳದ ಬಳಿಕ ಉತ್ತರಾಖಂಡದಲ್ಲಿ ಮೇ.14ರಿಂದ ಚಾರ್‌ ಧಾಮ್‌ ಯಾತ್ರೆ ಪ್ರಾರಂಭ: ಸರಕಾರ ಘೋಷಣೆ

Update: 2021-04-28 11:05 GMT

ಹರಿದ್ವಾರ: ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕುಂಭ ಮೇಳವು ಉತ್ತರಾಖಂಡ ಮಾತ್ರವಲ್ಲದೇ ದೇಶಾದ್ಯಂತ ಸೂಪರ್‌ ಸ್ಪ್ರೆಡರ್‌ ಆಗಿ ಮಾರ್ಪಟ್ಟಿತ್ತು. ಕುಂಭ ಮೇಳದ ಪರಿಣಾಮದಿಂದಾಗಿ ಉತ್ತರಾಖಂಡದ ಕೋವಿಡ್‌ ಸೋಂಕು ಪ್ರಮಾಣ 1800% ಹೆಚ್ಚಾಗಿದ್ದ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ಸದ್ಯ ಉತ್ತರಾಖಂಡದ ಕೋವಿಡ್‌ ಪರಿಸ್ಥಿತಿಯೂ ಬಿಗಡಾಯಿಸಿದೆ. ಈ ನಡುವೆ ಇದೀಗ ಮತ್ತೊಂದು ಸೂಪರ್‌ ಸ್ಪ್ರೆಡರ್‌ ಕಾರ್ಯಕ್ರಮ ನಡೆಯುವ ಕುರಿತು ಸರಕಾರವೇ ಘೋಷಣೆ ಹೊರಡಿಸಿದ್ದಾಗಿ News18 ವರದಿ ಮಾಡಿದೆ.

ಮೇ 14ರಿಂದ ಚಾರ್ ಧಾಮ್‌ ಯಾತ್ರೆ ಪ್ರಾರಂಭವಾಗಲಿದ್ದು, ಕೇದಾರನಾಥ, ಬದ್ರೀನಾಥ, ಯಮುನೋತ್ರಿ ಹಾಗೂ ಗಂಗೋತ್ರಿಗಳಿಗೆ ಸಾವಿರಾರು ಭಕ್ತರು ಯಾತ್ರ ನಡೆಸಲಿದ್ದಾರೆ ಎಂದು ಉತ್ತರಾಖಂಡ ಸರಕಾರ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಿರ್ಧಾರದ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, "ಕುಂಭಮೇಳದ ಪರಿಣಾಮದಿಂದ ಇನ್ನೂ ಸರಕಾರ ಬುದ್ಧಿ ಕಲಿತಿಲ್ಲವೇ?" ಎಂದು ಬಳಕೆದಾರರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News