ಕೊರೋನದ ಭಯದಲ್ಲಿ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನಿಷೇಧ ಹೇರಿದ ಗ್ರಾಮಸ್ಥರು: ಸೈಕಲ್‌ ನಲ್ಲಿ ಶವವಿಟ್ಟು ತಿರುಗಾಡಿದ ವೃದ್ಧ

Update: 2021-04-28 12:17 GMT

ಜೌನ್ಪುರ್:‌ ಉತ್ತರಪ್ರದೇಶದಲ್ಲಿ ಕೋವಿಡ್‌ ಪರಿಸ್ಥಿತಿಯು ತೀವ್ರ ಹದಗೆಡುತ್ತಿದ್ದು, ಹಲವೆಡೆ ಆಕ್ಸಿಜನ್‌ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಈ ನಡುವೆ ಕೋವಿಡ್‌ ಪೀಡಿತರಾಗಿ ಮೃತಪಟ್ಟ ಮಹಿಳೆಯೋರ್ವರ ಮೃತದೇಹದ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಅವಕಾಶ ನೀಡದೇ ಇದ್ದ ಕಾರಣ ಪತ್ನಿಯ ಶವವನ್ನು ಸೈಕಲ್‌ ಮೇಲಿಟ್ಟು ತಿರುಗಾಡುತ್ತಿರುವ ವೃದ್ಧರೋರ್ವರ ಫೋಟೊ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

ಜ್ಯೋತಿ ಸಿನ್ಹಾ ಎಂಬವರು ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ಈ ಫೋಟೊ ಪ್ರಕಟಿಸಿದ್ದು, ಕೆಲವೇ ಗಂಟೆಗಳಲ್ಲಿ ಪೋಸ್ಟ್‌ ವೈರಲ್‌ ಆಗಿದೆ.  

ಉತ್ತರಪ್ರದೇಶದ ಜೌನ್ಪುರ್‌ ಜಿಲ್ಲೆಯ ಅಂಬರ್ಪುರ್‌ ಎಂಬ ಪ್ರದೇಶದಲ್ಲಿ  ಘಟನೆ ನಡೆದಿದ್ದು, ಕೋವಿಡ್‌ ನಿಂದ ಮೃತಪಟ್ಟಿದ್ದ ಮಹಿಳೆ ರಾಜ್‌ ಕುಮಾರಿ ದೇವಿ ಎಂಬಾಕೆಯ ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸಲು ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ. ತಮಗೂ ಕೊರೋನ ಹರಡಬಹುದು ಎಂಬ ಭೀತಿಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ. ಈ ನಡುವೆ ಮಹಿಳೆಯ ಪತಿ ಆಕೆಯ ಮೃತದೇಹವನ್ನು ಸೈಕಲ್‌ ನಲ್ಲಿಟ್ಟುಕೊಂಡು ತಿರುಗಾಡಿದ್ದಾರೆ ಎಂದು ತಿಳಿದು ಬಂದಿದೆ. ಕೊನೆಗೆ ಅವರು ಬಸವಳಿದು ಸೈಕಲ್‌ ಮತ್ತು ಮೃತದೇಹದೊಂದಿಗೆ ರಸ್ತೆಯಲ್ಲಿ ಬಿದ್ದಿದ್ದು, ಅವರು ಸಮೀಪದಲ್ಲೇ ಕುಳಿತಿರುವ ದೃಶ್ಯವು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

"ಈ ಫೋಟೊವನ್ನು ನೋಡುತ್ತಿರುವಂತೆಯೇ ವಿಶ್ವದ ಅತೀದೊಡ್ಡ ಸ್ಟೇಡಿಯಂ ಮತ್ತು ಅತೀದೊಡ್ಡ ಪ್ರತಿಮೆಯ ಅವಶ್ಯಕತೆಯೇನು? ಎಂಬ ಪ್ರಶ್ನೆ ಮೂಡುತ್ತದೆ" ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದ್ದಾರೆ.

Posted by Jyoti Sinha on Tuesday, 27 April 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News