ಅಲಿಗಢ್‌ ನಲ್ಲಿ ಒಂದೇ ದಿನದಲ್ಲಿ 70 ಮಂದಿ ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟಿದ್ದಾರೆ: ರಾಣಾ ಅಯ್ಯೂಬ್‌ ಟ್ವೀಟ್

Update: 2021-04-28 16:44 GMT

ಲಕ್ನೋ: ಉತ್ತರಪ್ರದೇಶದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆಯಿಂದ ಹಲವು ಮಂದಿ ಸಾವನ್ನಪ್ಪುತ್ತಿದ್ದಾರೆ. ಆದರೆ, ಸಾಮಾಜಿಕ ತಾಣಗಳಲ್ಲಿ ಆಕ್ಸಿಜನ್‌ ಕೊರತೆಯ ಕುರಿತು ಪೋಸ್ಟ್‌ ಮಾಡಿದರೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಯೋಗಿ ಆದಿತ್ಯನಾಥ್‌ ಹೇಳಿಕೆ ನೀಡಿದ್ದರು. ಇದು ಮಾತ್ರವಲ್ಲದೇ, ಸ್ನೇಹಿತನ ಅಜ್ಜ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಿಗೆ ಆಕ್ಸಿಜನ್‌ ಅವಶ್ಯಕತೆ ಇದೆ ಎಂದು ಟ್ವಿಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಪತ್ರಕರ್ತೆ ರಾಣಾ ಅಯ್ಯೂಬ್‌ ಉತ್ತರಪ್ರದೇಶದ ಆಕ್ಸಿಜನ್‌ ಅವ್ಯವಸ್ಥೆಯ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಟ್ವಿಟರ್‌ ನ ತಮ್ಮ ಅಧಿಕೃತ ಖಾತೆಯಲ್ಲಿ "ನಾನು ಅಲಿಗಢ್‌ ನ ಸ್ಥಳೀಯ ವರದಿಗಾರೊಂದಿಗೆ ಕರೆ ಮಾಡಿ ಮಾತನಾಡಿದೆ. ಕೇವಲ ಅಲಿಗಢ್‌ ನಲ್ಲೇ ಬೆಳಗ್ಗಿನಿಂದ ಸರಿಸುಮಾರು 70 ಮಂದಿ ಆಕ್ಸಿಜನ್‌ ಇಲ್ಲದೇ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದೊಂದು ಹತ್ಯಾಕಾಂಡವಾಗಿದೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News