ಐಪಿಎಲ್: ಹೈದರಾಬಾದ್ ವಿರುದ್ಧ ಚೆನ್ನೈ ಜಯಭೇರಿ

Update: 2021-04-28 17:34 GMT

ಹೊಸದಿಲ್ಲಿ: ಋತುರಾಜ್ ಗಾಯಕ್ವಾಡ್(75, 44 ಎಸೆತ)ಹಾಗೂ ಎಫ್ ಡು ಪ್ಲೆಸಿಸ್(56, 38 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ 23ನೇ ಐಪಿಎಲ್ ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಬುಧವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 172 ರನ್ ಗುರಿ ಬೆನ್ನಟ್ಟಿದ ಚೆನ್ನೈ ತಂಡ 18.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಟೂರ್ನಿಯಲ್ಲಿ ಈ ತನಕ ಆಡಿರುವ 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಚೆನ್ನೈ ಒಟ್ಟು 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.

ಚೆನ್ನೈ ಪರ ಇನಿಂಗ್ಸ್ ಆರಂಭಿಸಿದ ಗಾಯಕ್ವಾಡ್(75, 44ಎಸೆತ, 12 ಬೌಂಡರಿ)ಹಾಗೂ ಪ್ಲೆಸಿಸ್(56, 38 ಎಸೆತ, 6 ಬೌಂ,. 1 ಸಿ.)ಭದ್ರ ಬುನಾದಿ ಹಾಕಿಕೊಟ್ಟರು. ರವಿಂದ್ರ ಜಡೇಜ(ಔಟಾಗದೆ 07) ಹಾಗೂ ಸುರೇಶ್ ರೈನಾ(ಔಟಾಗದೆ 17) ಕ್ರೀಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ಹೈದರಾಬಾದ್ ಪರವಾಗಿ ರಶೀದ್ ಖಾನ್ (3-36)ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ನಾಯಕ ವಾರ್ನರ್(57, 55 ಎಸೆತ, 3 ಬೌಂ. 2 ಸಿ.)ಹಾಗೂ ಮನೀಷ್ ಪಾಂಡೆ(61, 46 ಎಸೆತ, 5 ಬೌಂ.1 ಸಿ.) ಅರ್ಧಶತಕದ ಕೊಡುಗೆ ನೀಡಿದರು. ವಿಲಿಯಮ್ಸನ್ ಔಟಾಗದೆ 26 ಹಾಗೂ ಕೇದಾರ್ ಜಾಧವ್ ಔಟಾಗದೆ 12 ರನ್ ಗಳಿಸಿದ್ದಾರೆ.

ಚೆನ್ನೈ ಪರವಾಗಿ ಲುಂಗಿ ಗಿಡಿ(2-35)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News