ಯಕ್ಷಗಾನ ಕಲಾವಿದರಿಗೆ ಉಚಿತ ದಿನಸಿ ಸಾಮಗ್ರಿ

Update: 2021-04-29 04:39 GMT

ಮಂಗಳೂರು, ಎ.29: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ ವರ್ಷದಂತೆ ಈ ಬಾರಿಯೂ ತೀರಾ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ. ಅವಶ್ಯ ಇರುವ ಕಲಾವಿದರು ಮೊಬೈಲ್ 9164521588 ,ಅಥವಾ  7411161662 ಇಲ್ಲವೇ ಸಮೀಪದ ಪಟ್ಲ ಫೌಂಡೇಶನ್ ಘಟಕದ ಪದಾಧಿಕಾರಿಗಳನ್ನು ಮೇ 10ರ ಒಳಗೆ ಸಂಪರ್ಕಿಸಿ ತಮ್ಮ ಹೆಸರು, ವಿಳಾಸ ಹಾಗೂ ಮೇಳದ ಹೆಸರು ನೋಂದಾಯಿಸಬಹುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಕೆ. ಪುರುಷೋತ್ತಮ ಭಂಡಾರಿ ಅಡ್ಯಾರ್ ಪ್ರಟಕನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News