5ನೇ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ

Update: 2021-04-29 05:32 GMT

ದುಬೈ: ಟ್ವೆಂಟಿ-20 ಬ್ಯಾಟ್ಸ್‌ಮನ್‌ಗಳ ಐಸಿಸಿಯ ಇತ್ತೀಚಿನ ಶ್ರೇಯಾಂಕದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಹಿರಿಯ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕ್ರಮವಾಗಿ ಐದನೇ ಮತ್ತು ಏಳನೇ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ.

ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ಟಾಪ್ -10ರೊಳಗೆ ಪ್ರವೇಶಿಸಿದ್ದಾರೆ.

ಮೊದಲ ಮತ್ತು ಮೂರನೇ ಪಂದ್ಯದಲ್ಲಿ ಅಜೇಯ 82 ಮತ್ತು 91 ರನ್ ಗಳಿಸಿದ 28 ರ ಹರೆಯದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಝ್ವ್‌ನ್ ಐದು ಸ್ಥಾನಗಳ ಭಡ್ತಿ ಪಡೆದು 10ನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಮತ್ತು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ.

 ರ್ಯಾಂಕಿಂಗ್ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಝಮ್ ಮೂರನೇ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಇನ್ನೂ 892 ಅಂಕಗಳೊಂದಿಗೆ ಇಂಗ್ಲೆಂಡ್‌ನ ಡೇವಿಡ್ ಮಲಾನ್ ಅಗ್ರಸ್ಥಾನದಲ್ಲಿದ್ದರೆ, ಆ್ಯರನ್ ಫಿಂಚ್ 830 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಆದರೆ ಬೌಲರ್‌ಗಳು ಅಥವಾ ಆಲ್‌ರೌಂಡರ್ ಪಟ್ಟಿಯಲ್ಲಿ ಟಾಪ್ -10 ರಲ್ಲಿ ಭಾರತದ ಆಟಗಾರರು ಸ್ಥಾನ ಪಡೆದಿಲ್ಲ.

ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ, ಕೊಹ್ಲಿ ಮತ್ತೆ ಐದನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಏಳನೇ ಸ್ಥಾನದಲ್ಲಿದ್ದಾರೆ.

ಕೇನ್ ವಿಲಿಯಮ್ಸನ್ ಇನ್ನೂ ಟೆಸ್ಟ್ ಬ್ಯಾಟ್ಸ್ ಮನ್‌ಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಪ್ಯಾಟ್ ಕಮ್ಮಿನ್ಸ್ (908) , ಭಾರತದ ರವಿಚಂದ್ರನ್ ಅಶ್ವಿನ್ (850) ಬೌಲರ್‌ಗಳಲ್ಲಿ ಗಮನಾರ್ಹ (48 ಅಂಕಗಳು) ಮುನ್ನಡೆ ಸಾಧಿಸಿದ್ದಾರೆ.

 ಟೆಸ್ಟ್ ಆಲ್‌ರೌಂಡರ್‌ಗಳಲ್ಲಿ ರವೀಂದ್ರ ಜಡೇಜ ಅವರು ಅಶ್ವಿನ್ ಅವರೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಜೇಸನ್ ಹೋಲ್ಡರ್ ಅಗ್ರಸ್ಥಾನದಲ್ಲಿದ್ದಾರೆ.

 ಭಾರತದ ನಾಯಕ ಕೊಹ್ಲಿ ಏಕದಿನ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು, ಪಾಕಿಸ್ತಾನದ ನಾಯಕ ಬಾಬರ್ ಅಝಮ್‌ಗೆ ಅಗ್ರಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News