ಮಲ್‌ಜ‌ ಸಂಸ್ಥೆಯಿಂದ ಒಂದು ಸಾವಿರ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Update: 2021-04-30 07:53 GMT

ಬೆಳ್ತಂಗಡಿ; ಕಾಶಿಬೆಟ್ಟು ನಲ್ಲಿರುವ 'ಮಲ್‌ಜ‌ ದ‌ಅವಾ ಮತ್ತು ರಿಲೀಫ್ ಸಂಸ್ಥೆ' ಈ ವರ್ಷ ಆಯ್ದ 1 ಸಾವಿರ ಕುಟುಂಬಗಳಿಗೆ ತಲಾ ಮೂರು ಸಾವಿರ ರೂ.‌ ವೆಚ್ಚದ ಅಗತ್ಯ ಆಹಾರ ಉತ್ಪನ್ನಗಳ ರಂಝಾನ್ ಕಿಟ್ ಅನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಿದೆ.

ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಮದನಿ ಅವರು ನೇತೃತ್ವ ನೀಡುತ್ತಿರುವ ಮಲ್‌ಜ‌ಅ ಸಂಸ್ಥೆ   ಈ‌ ವರ್ಷ ಒಟ್ಟು ಒಂದು‌ ಸಾವಿರ ಕುಟುಂಬಗಳಿಗೆ ಕಿಟ್ ನೀಡಿದೆ.

ತಾಲೂಕು ಮಾತ್ರವಲ್ಲದೆ ಹೊರತಾಲೂಕುಗಳಿಗೂ ಇದರ ಪ್ರಯೋಜನ ಲಭಿಸಿದ್ದು, 100 ಮೊಹಲ್ಲಾಗಳ 10 ಕೇಂದ್ರಗಳಲ್ಲಿ ಲಾರಿ ಮೂಲಕ ಸಾಗಿಸಿ ಕೋವಿಡ್ ನಿಯಮಾವಳಿ ಪಾಲಿಸಿ ಫಲಾನುಭವಿಗೆ ನೇರವಾಗಿ ತಲುಪಿಸಿದೆ.

ಕಾರ್ಯಾಚರಣೆಗೆ ಉಜಿರೆ ತಂಙಳ್ ಅವರೇ ನೇತೃತ್ವ ನೀಡಿದ್ದು, ಅನಿವಾಸಿ ಭಾರತೀಯರು, ಜಿಲ್ಲೆ- ಹೊರ ಜಿಲ್ಲೆಗಳ ದಾನಿಗಳು ಇದಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಸಂಸ್ಥೆಯ ಮೆನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ,‌‌ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.‌ಶರೀಫ್ ಬೆರ್ಕಳ,‌ ಪ್ರಮುಖ ಸಂಯೋಜಕರುಗಳಾದ ಸುಲೈಮಾನ್ ಕುಂಟಿನಿ,‌‌ಎಂ.ಹೆಚ್ ಮದನಿ,‌ ಹಕೀಂ‌ ಮದನಿ, ರಝಾಕ್ , ಮೊದಲಾದವರು ವಿತರಣೆ ಕೈಗೊಂಡಿದ್ದಾರೆ.

ಮುಂಡಾಜೆಯಲ್ಲಿ ಪ್ರಾರಂಭವಾದ ಕಾರ್ಯಕ್ರಮದಲ್ಲಿ ರಫೀಕ್ ಮದನಿ,‌ ಹಾರಿಸ್  ಸ‌ಅದಿ,‌ ಅಶ್ರಫ್ ಆಲಿಕುಂಞಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News