×
Ad

ಅಮೆರಿಕದಿಂದ ಮೊದಲ ಕೋವಿಡ್ ತುರ್ತು ಸಹಾಯ ಸಾಮಗ್ರಿಗಳು ಭಾರತಕ್ಕೆ ಆಗಮನ

Update: 2021-04-30 12:17 IST

ಹೊಸದಿಲ್ಲಿ: ಕೊರೋನದ ಎರಡನೇ ಅಲೆಯೊಂದಿಗೆ ಭಾರತವು ಹೋರಾಡುತ್ತಿರುವಾಗ ಇಂದು ಬೆಳಗ್ಗೆ ಅಮೆರಿಕದಿಂದ ಮೊದಲ ಕೋವಿಡ್ ತುರ್ತು ಸಹಾಯ ಸಾಮಗ್ರಿಗಳನ್ನು ಸ್ವೀಕರಿಸಿದೆ. 

ಒಂದು ವಾರಕ್ಕೂ ಹೆಚ್ಚು ಸಮಯದಿಂದ ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಕೊರೋನ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿವೆ. ಆಸ್ಪತ್ರೆಯ ಬೆಡ್ ಗಳು ಹಾಗೂ ಮೆಡಿಕಲ್ ಆಕ್ಸಿಜನ್ ಗಾಗಿ ಬೇಡಿಕೆಗಳು ಗಗನಕ್ಕೇರಿವೆ.

400ಕ್ಕೂ ಅಧಿಕ ಆಮ್ಲಜನಕ ಸಿಲಿಂಡರ್ ಗಳು, ಸುಮಾರು ಒಂದು ಮಿಲಿಯನ್ ಕ್ಷಿಪ್ರ ಕೊರೋನ ವೈರಸ್ ಪರೀಕ್ಷಾ ಕಿಟ್ ಗಳು ಹಾಗೂ ಇತರ ಆಸ್ಪತ್ರೆಯ ಉಪಕರಣಗಳೊಂದಿಗೆ ಸೂಪರ್ ಗ್ಯಾಲಕ್ಸಿ ಮಿಲಿಟರಿ  ಟ್ರ್ಯಾನ್ಸ್ ಪೋರ್ಟರ್ ಇಂದು ಬೆಳಗ್ಗೆ ದಿಲ್ಲಿಯ ಅಂತರ್ ರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದಿದೆ ಎಂದು ಸುದ್ದಿಸಂಸ್ಥೆ ಎಎಫ್ ಪಿ  ವರದಿ ಮಾಡಿದೆ.

ಅಮೆರಿಕದ ರಾಯಭಾರ ಕಚೇರಿಯು ಕೋವಿಡ್ ತುರ್ತು ಸಹಾಯ ಸಾಮಗ್ರಿಗಳ ಚಿತ್ರವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದೆ.

ಅಮೆರಿಕದಿಂದ ಹಲವಾರು ತುರ್ತು ಕೋವಿಡ್-19 ಪರಿಹಾರ ಸಾಗಣೆಗಳು ಭಾರತಕ್ಕೆ ಬಂದಿವೆ. 70 ವರ್ಷಗಳ ಸಹಕಾರವನ್ನು ಆಧರಿಸಿ ಅಮೆರಿಕವು ಭಾರತದೊಂದಿಗೆ ನಿಂತಿದೆ. ನಾವು ಕೋವಿಡ್ ಸಾಂಕ್ರಾಮಿಕ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ. ಕಂಪೆನಿಗಳು ಹಾಗೂ ದಾನಿಗಳು ನೀಡಿದ ಉಪಕರಣಗಳನ್ನು ಸಹ ವಿಶೇಷ ವಿಮಾನದಲ್ಲಿ ಮುಂದಿನ ವಾರ ಭಾರತಕ್ಕೆ ಬರಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News