ಕಾಪು ಪುರಸಭೆ ಕರಡು ಮೀಸಲು ಪ್ರಕಟ

Update: 2021-05-02 14:55 GMT

ಕಾಪು : ಕಾಪು ಪುರಸಭೆಯ ಈಗಿನ ಆಡಳಿತಾವಧಿ ಜೂನ್ ತಿಂಗಳಿನಲ್ಲಿ ಕೊನೆಯಾಗಲಿದ್ದು, 23 ವಾರ್ಡ್‍ಗಳ ಕರಡು ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿದೆ.

ಈ ಕರಡು ಮೀಸಲಾತಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ಲಿಖಿತ ಕಾರಣ ಸಹಿತ ದಾಖಲೆಗಳೊಂದಿಗೆ 7 ದಿನಗಳೊಳಗಾಗಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

2011ರ ಜನಗಣತಿಯಂತೆ ಸರ್ಕಾರ ಪ್ರಕಟಿಸಿರುವ ಮೀಸಲು ಇಂತಿದೆ. ಕೈಪುಂಜಾಲು-ಸಾಮಾನ್ಯ, ಕೋತಲಕಟ್ಟೆ-ಹಿಂದುಳಿದ ವರ್ಗ ಅ ಮಹಿಳೆ, ಕರಾವಳಿ-ಹಿಂದುಳಿದ ವರ್ಗ ಬಿ ಮಹಿಳೆ, ಪೊಲಿಪು ಗುಡ್ಡೆ-ಸಾಮಾನ್ಯ, ದಂಡತೀರ್ಥ- ಹಿಂದುಳಿದ ವರ್ಗ ಅ, ಕಲ್ಯಾ-ಸಾಮಾನ್ಯ ಮಹಿಳೆ, ಭಾರತ್ ನಗರ-ಹಿಂದುಳಿದ ವರ್ಗ ಬಿ, ಬೀಡು ಬದಿ-ಸಾಮಾನ್ಯ, ಪೊಲಿಪು-ಹಿಂದುಳಿದ ವರ್ಗ ಅ ಮಹಿಳೆ, ಕಾಪು ಪೇಟೆ-ಸಾಮಾನ್ಯ ಮಹಿಳೆ, ಲೈಟ್ ಹೌಸ್-ಹಿಂದುಳಿದ ವರ್ಗ ಅ, ಕೊಪ್ಪಲಂಗಡಿ- ಪರಿಶಿಷ್ಟ ಪಂಗಡ, ತೊಟ್ಟಂ-ಪರಿಶಿಷ್ಟ ಜಾತಿ, ದುಗನ್‍ತೋಟ-ಸಾಮಾನ್ಯ, ಮಂಗಳಪೇಟೆ-ಸಾಮಾನ್ಯ ಮಹಿಳೆ, ಜನಾರ್ದನ ದೇವಸ್ಥಾನ-ಹಿಂದುಳಿದ ವರ್ಗ ಅ ಮಹಿಳೆ, ಬಡಗರಗುತ್ತು-ಸಾಮಾನ್ಯ, ಕೊಂಬಗುಡ್ಡೆ-ಹಿಂದುಳಿದ ವರ್ಗ ಅ, ಜನರಲ್ ಶಾಲೆ-ಸಾಮಾನ್ಯ ಮಹಿಳೆ, ಗುಜ್ಜಿ-ಪರಿಶಿಷ್ಟ ಜಾತಿ ಮಹಿಳೆ, ಗರಡಿ-ಸಾಮಾನ್ಯ, ಕುಡ್ತಿಮಾರ್-ಸಾಮಾನ್ಯ ಮಹಿಳೆ, ಅಹಮ್ಮದಿ ಮೊಹಲ್ಲಾ-ಸಾಮಾನ್ಯ ಮಹಿಳೆ ಮೀಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News