×
Ad

ಅಸ್ಸಾಂನಲ್ಲಿ ಮುಖ್ಯಮಂತ್ರಿ ಪಟ್ಟ ಯಾರ ಪಾಲಾಗಲಿದೆ?

Update: 2021-05-03 22:59 IST

ಗುವಾಹಟಿ: ಅಸ್ಸಾಂನಲ್ಲಿ ಎನ್‌ಡಿಎ ಮತ್ತೊಮ್ಮೆ ಜನಾದೇಶವನ್ನು ಪಡೆದಿದ್ದರೂ ಕೂಡ ಮುಂದಿನ ಮುಖ್ಯಮಂತ್ರಿ ಯಾರೆಂಬ ಪ್ರಶ್ನೆ ಎದುರಾಗಿದೆ. ಮುಖ್ಯಮಂತ್ರಿ ಪಟ್ಟಕ್ಕಾಗಿ ಸರ್ಬಾನಂದ ಸೋನೊವಾಲ್ ಹಾಗೂ  ಹಿಮಂತ ಬಿಸ್ವಾ ಶರ್ಮಾ ನಡುವೆ ಪೈಪೋಟಿ ಪ್ರಾರಂಭವಾಗಿದೆ. ಏಕೆಂದರೆ ಈ ಬಾರಿಯ ಚುನಾವಣೆಗೆ ಮೊದಲು ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯನ್ನು  ಹೆಸರಿಸಲಿಲ್ಲ.

ಬಿಜೆಪಿ ಇನ್ನೂ ಸಿಎಂ ಅವರನ್ನು ನಿರ್ಧರಿಸಿಲ್ಲ, ಆದರೆ ಅದನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಮಾಡಲಿದ್ದೇವೆ. ಒಮ್ಮೆ ಮತ ಎಣಿಕೆ ಮುಗಿದು, ಫಲಿತಾಂಶಗಳನ್ನು ತಿಳಿಸಿದ ನಂತರ, ಬಿಜೆಪಿಯ ಅತ್ಯುನ್ನತ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪಕ್ಷದ ಹಿರಿಯ ನಾಯಕ ಜಿತೇಂದ್ರ ಸಿಂಗ್  ಹೇಳಿದರು.

ಸೋನೊವಾಲ್ ಮತ್ತು ಶರ್ಮಾ ಇಬ್ಬರೂ ಹಿಂದೆ ಆಲ್-ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಆಸು) ನಲ್ಲಿದ್ದರು. ಸೋನೊವಾಲ್ ಎಜಿಪಿ ಮತ್ತು ಶರ್ಮಾ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದರು.

ಸೋನೊವಾಲ್ ಅವರು ಶರ್ಮಾಗಿಂತ ಮೊದಲೇ ಬಿಜೆಪಿ ಸೇರಿದ್ದರು. ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡಿದ್ದ ಸೋನೊವಾಲ್ 2016ರಲ್ಲಿ ಅನಾಯಾಸವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News