ಪಶ್ಚಿಮಬಂಗಾಳದ ಹಲವು ಭಾಗಗಳಲ್ಲಿ ಹಿಂಸಾಚಾರ: ಗವರ್ನರ್‌ರಿಂದ ಡಿಜಿಪಿಗೆ ಸಮನ್ಸ್

Update: 2021-05-03 17:58 GMT

ಕೋಲ್ಕತಾ, ಮೆ 2: ಪಶ್ಚಿಮ ಬಂಗಾಳದ ಹಲವು ಸ್ಥಳಗಳಲ್ಲಿ ರವಿವಾರದಿಂದ ಚುನಾವಣೋತ್ತರ ಹಿಂಸಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಗವರ್ನರ್ ಜಗದೀಪ್ ಅವರು ಸೋಮವಾರ ರಾಜ್ಯ ಡಿಜಿಪಿ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಮತ ಎಣಿಕೆ ಪ್ರಗತಿಯಲ್ಲಿರುವಂತೆ ರಾಜ್ಯಾದ್ಯಂತ ಶನಿವಾರ ಪಕ್ಷದ ಕನಿಷ್ಠ ಐವರು ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಹತ್ಯೆಗೈಯಲಾಗಿದೆ. ಅಲ್ಲದೆ, ಬಿಜೆಪಿಯ ಕಚೇರಿ ಹಾಗೂ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಬಿಜೆಪಿಯ ಈ ಆರೋಪವನ್ನು ಮಮತಾ ಬ್ಯಾನರ್ಜಿ ತಳ್ಳಿ ಹಾಕಿದ್ದಾರೆ. ಪಶ್ಚಿಮಬಂಗಾಳದ ಹೊರಗೆ ನಡೆದ ಗಲಭೆಯ ಹಳೆಯ ಚಿತ್ರಗಳನ್ನು ಬಳಸಿ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಹತ್ಯೆ ಹಾಗೂ ಬೆಂಕಿ ಹಚ್ಚುವಿಕೆಯಂತಹ ಹಲವು ಘಟನೆಗಳ ವರದಿಗಳು ಆತಂಕ ಉಂಟು ಮಾಡಿವೆ. ಪಕ್ಷದ ಕಚೇರಿ, ಮನೆ, ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಪರಿಸ್ಥಿತಿ ಆತಂಕಕಾರಿಯಾಗಿದೆ ಎಂದು ಧಂಖರ್ ಸೋಮವಾರ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಪೊಲೀಸ್‌ನ ಡಿಜಿಪಿಗೆ ತುರ್ತು ಸಮನ್ಸ್ ನೀಡಲಾಗಿದೆ ಎಂದು ರಾಜ್ಯಪಾಲರು ಟ್ವೀಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News