ಮಂಗಳೂರು : ಮೇ 8ರಂದು ಮಸೀದಿಯ ಸ್ವಯಂಸೇವಕರಿಗೆ ಕೊರೋನ ನಿರ್ವಹಣೆಯ ಬಗ್ಗೆ ತರಬೇತಿ

Update: 2021-05-04 12:43 GMT
ಸಾಂದರ್ಭಿಕ ಚಿತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರೋಗಿಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈ ನಿಟ್ಟಿನಲ್ಲಿ 'ಮಂಗಳೂರು ಮಸ್ಜಿದ್ಸ್ ಅಸೋಸಿಯೇಶನ್' ವತಿಯಿಂದ ಮಸೀದಿಯ ಸ್ವಯಂ ಸೇವಕರಿಗೆ ಕೊರೋನ ನಿರ್ವಹಣೆಯ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯಲ್ಲಿ ಕೊರೋನ ಸೋಂಕು ನಿರ್ವಹಣೆಗೆ ಜಮಾಅತ್ ಹಂತದಲ್ಲಿ ಮಾಡಬಹುದಾದ ಪೂರ್ವ ಸಿದ್ಧತೆಗಳು, ರೋಗಕ್ಕೆ ಪ್ರಥಮ ಹಂತದ ಚಿಕಿತ್ಸೆಗಳು, ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ಹೇಗೆ ಕೌನ್ಸೆಲಿಂಗ್ ಮಾಡಬೇಕು?  ಮಸೀದಿಯಲ್ಲಿ ಕೋವಿಡ್ ಹೆಲ್ಪ್ ಲೈನ್ ತೆರೆಯುವುದು ಹೇಗೆ ? ಹೀಗೆ ಒಟ್ಟಿನಲ್ಲಿ ಕೊರೋನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಯಾವ ರೀತಿ ಸಜ್ಜಾಗಬಹುದು ಎಂಬ ವಿಷಯದಲ್ಲಿ ತಜ್ಞ ವೈದ್ಯರು ಮತ್ತು ಆಪ್ತ ಸಮಾಲೋಚಕರಿಂದ ತರಬೇತಿ ನೀಡಲಾಗುವುದು.

ತರಬೇತಿಯು ಮೇ 8ರ ಶನಿವಾರ ಬೆಳಗ್ಗೆ 9.30ಕ್ಕೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣ, ವಿಶ್ವಾಸ್ ಕ್ರೌನ್,  ಕಂಕನಾಡಿಯಲ್ಲಿ ನಡೆಯಲಿದೆ. ಆಸಕ್ತ ಮಸೀದಿ ಆಡಳಿತ ಕಮಿಟಿಯವರು ತಮ್ಮ ಜಮಾಅತಿನಿಂದ ಕನಿಷ್ಠ 5 ಮಂದಿ ಸ್ವಯಂಸೇವಕರನ್ನು ಈ ತರಬೇತಿಗೆ ಕಳುಹಿಸಿಕೊಡಬಹುದು. ನೋಂದಣಿ ಕಡ್ಡಾಯವಾಗಿದ್ದು, ಮೊಬೈಲ್ ಸಂಖ್ಯೆ 8277192001ಗೆ ಕರೆ ಮಾಡಿ, ಭಾಗವಹಿಸುವಿಕೆಯನ್ನು ಖಾತರಿ ಪಡಿಸತಕ್ಕದ್ದು ಎಂದು ಮಂಗಳೂರು ಮಸ್ಜಿದ್ಸ್ ಎಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News