ಕೋಳಿ ಅಂಕ: ಆರು ಮಂದಿ ಬಂಧನ

Update: 2021-05-04 16:14 GMT

ಕಾಪು, ಮೇ 4: ಉಳಿಯಾರಗೋಳಿ ಗ್ರಾಮದ ಪಿನಾಕಿನಿ ನದಿಯ ಸಮೀಪ ಮೇ 3ರಂದು ಸಂಜೆ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಕಾಪು ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಸಂದೀಪ, ಸಚಿನ್, ಸುರೇಶ್, ವಿಲ್ಸನ್, ಹನುಮಂತ, ಶರತ್ ಪೂಜಾರಿ ಬಂಧಿತ ಆರೋಪಿಗಳು. ಇವರಿಂದ 6150ರೂ. ಮೌಲ್ಯದ 16 ಕೋಳಿ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶ್ರೀಕಾಂತ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News