ಆಕ್ಸಿಜನ್‌ ಇಲ್ಲದೇ ರೋಗಿಗಳ ಸಾವು: ದಾಳಿಯ ಭಯದಿಂದ ಆಸ್ಪತ್ರೆ ಬಿಟ್ಟು ಅಡಗಿ ಕುಳಿತ ವೈದ್ಯರು, ಸಿಬ್ಬಂದಿ

Update: 2021-05-05 10:17 GMT

ಗುರುಗ್ರಾಮ:‌ ಹಲವಾರು ಆಸ್ಪತ್ರೆಗಳು ಸದ್ಯ ಆಕ್ಸಿಜನ್‌ ಕೊರತೆಯನ್ನು ಎದುರಿಸುತ್ತಿದ್ದು, ನೂರಾರು ಮಂದಿ ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟಿದ್ದಾರೆ. ಈ ನಡುವೆ ಆಕ್ಸಿಜನ್‌ ಅಲಭ್ಯತೆಯಿಂದ ಮೃತಪಟ್ಟವರ ಕುಟುಂಬಸ್ಥರು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಥಳಿಸಿದ ಕಾರಣದಿಂದ ಎಲ್ಲ ಸಿಬ್ಬಂದಿಗಳು ಆಸ್ಪತ್ರೆ ಬಿಟ್ಟು ಅಡಗಿ ಕುಳಿತ ಘಟನೆ ದಿಲ್ಲಿ ಪಕ್ಕದ ಗುರುಗ್ರಾಮದಲ್ಲಿ ನಡೆದಿದೆ.

ಈ ಕುರಿತಾದಂತೆ ಟ್ವಿಟರ್‌ ನಲ್ಲಿ ವೀಡಿಯೋ ಪ್ರಕಟಿಸಿರುವ ಎನ್ಡಿಟಿವಿ ಪತ್ರಕರ್ತೆ ಸುಕೃತಿ ದ್ವಿವೇದಿ, ಶುಕ್ರವಾರದಂದು ರಾತ್ರಿ ಆರು ರೋಗಿಗಳು ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟಿದ್ದರು, ಮೂವರು ಐಸಿಯುನಲ್ಲಿದ್ದು, ಇನ್ನು ಮೂವರು ರೆಗ್ಯುಲರ್‌ ವಾರ್ಡ್‌ ನಲ್ಲಿದ್ದರು. ಆರು ದಿನಗಳ ಹಿಂದೆ, ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಆಕ್ರಮಣಗೈದು ಹಲ್ಲೆ ನಡೆಸಿದ್ದ ಕಾರಣ ಅವರನ್ನು ಅಡಗಿ ಕೂರುವಂತೆ ಆಸ್ಪತ್ರೆಯ ನಿರ್ದೇಶಕರು ತಿಳಿಸಿದ್ದರೆಂದು ಟ್ವೀಟ್‌ ಮಾಡಿದ್ದಾರೆ.

"ನಾವು ಮಧ್ಯಾಹ್ನ ಎರಡು ಗಂಟೆಯಿಂದ ಸರಕಾರದ ಅಧಿಕೃತರಿಗೆ ಆಕ್ಸಿಜನ್‌ ಕೊರತೆ ಇರುವ ಕುರಿತು ಮಾಹಿತಿ ನೀಡಿದ್ದೆವು. ನಾಲ್ಕು ಗಂಟೆಗೆ ರೋಗಿಗಳ ಕುಟುಂಬಸ್ಥರಿಗೆ ಆಕ್ಸಿಜನ್‌ ಕೊರತೆಯ ಕುರಿತು ಮಾಹಿತಿ ನೀಡಿದ್ದೆವು. ಆದರೆ 11 ಗಂಟೆಯ ವರೆಗೆ ಯಾರೂ ಸಹಾಯಕ್ಕೆ ಬರಲಿಲ್ಲ" ಎಂದು ಆಸ್ಪತ್ರೆಯ ನಿರ್ದೇಶಕರು ಎನ್ಡಿಟಿವಿಗೆ ತಿಳಿಸಿದ್ದಾಗಿ ಟ್ವೀಟ್‌ ನಲ್ಲಿ ಉಲ್ಲೇಖಿಸಲಾಗಿದೆ.

"ಆರು ದಿನಗಳ ಹಿಂದೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ್ದ ಕಾರಣ ನಾವು ಅವರಿಗೆ ಅಡಗಿ ಕೂರುವಂತೆ ತಿಳಿಸಿದ್ದೆವು ಎಂದು ಅವರು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ಈ ಕುರಿತಾದಂತೆ, ಸಿಬ್ಬಂದಿಗಳನ್ನು ಥಳಿಸುವ ವೀಡಿಯೋ ಮತ್ತು ಸಿಬ್ಬಂದಿಗಳು ಆಸ್ಪತ್ರೆ ಬಿಟ್ಟು ಅಡಗಿ ಕುಳಿತಿರುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News