ಮುಂಬೈ ಮಾದರಿಯಿಂದ ಕಲಿಯಿರಿ, ದಿಲ್ಲಿಗೆ ಪೂರ್ಣ ಆಮ್ಲಜನಕ ಕೋಟಾ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್

Update: 2021-05-05 11:17 GMT

ಹೊಸದಿಲ್ಲಿ: ಆಮ್ಲಜನಕ ಬಿಕ್ಕಟ್ಟಿನ ಮಧ್ಯೆ ಕೇಂದ್ರ ಹಾಗೂ  ರಾಜ್ಯ ಸರಕಾರಗಳು ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿವೆ . ನ್ಯಾಯಾಂಗ ನಿಂದನೆ ಆರೋಪದಲ್ಲಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದರಲ್ಲಿ ಅರ್ಥವಿಲ್ಲ ಎಂದು ದಿಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರಕಾರದ ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ದಿಲ್ಲಿಗೆ ಆಮ್ಲಜನಕದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು "ಮುಂಬೈ ಮಾದರಿ" ಯಿಂದ ಪಾಠ ಕಲಿಯಬೇಕು ಸುಪ್ರೀಂ ಕೋರ್ಟ್ ಶಿಫಾರಸು ಮಾಡಿದೆ.

ಹಿಂದಿನ ಆದೇಶವನ್ನು ಪಾಲಿಸದ ಕಾರಣ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನು ಮುಂದುವರಿಸುವುದಾಗಿ ಕೆಳ ನ್ಯಾಯಾಲಯದ ಬೆದರಿಕೆ ವಿರುದ್ಧ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತೆರಳಿದ ನಂತರ ಇಂದು ಮಧ್ಯಾಹ್ನ ವಿಚಾರಣೆ ಪ್ರಾರಂಭವಾಯಿತು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠದ ಮುಂದೆ ಈ ವಿಷಯವನ್ನು ಮಂಡಿಸಿದ್ದರು.

"ಕೇಂದ್ರ ಹಾಗೂ ರಾಜ್ಯಗಳ ಅಧಿಕಾರಿಗಳನ್ನು ಜೈಲಿಗೆ ಹಾಕುವುದು ಅಥವಾ ಅವರನ್ನು ನ್ಯಾಯಾಂಗ  ನಿಂದನೆಗೆ ಒಳಪಡಿಸುವುದರಿಂದ, ದಿಲ್ಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

"ನಾವು 700 ಮೆಟ್ರಿಕ್ ಟನ್ ಗಳಿಗೆ ಆದೇಶಗಳನ್ನು ಅಂಗೀಕರಿಸಿದ್ದೇವೆ ... ನಾವು ಅದನ್ನು ನಂತರ ಪರಿಶೀಲಿಸಬಹುದು ... ನಾವು ದಿಲ್ಲಿಯ ನಾಗರಿಕರಿಗೆ ಉತ್ತರಿಸುತ್ತೇವೆ ... ದಿಲ್ಲಿಗೆ 700 ಟನ್ ಗಳನ್ನು ಖಚಿತಪಡಿಸಿಕೊಳ್ಳಲು ಯಾವುದು  ಅತ್ಯುತ್ತಮ ಮಾರ್ಗವಾಗಿದೆ?" ನ್ಯಾಯಾಲಯ ಕೇಳಿದೆ.

ದಿಲ್ಲಿ 500 ಟನ್ ಅನಿಲದೊಂದಿಗೆ ಎಲ್ಲವನ್ನು ನಿರ್ವಹಿಸಬಲ್ಲದು ಎಂದು ಕೇಂದ್ರ ಸರಕಾರ ಹೇಳಿದಾಗ, ನ್ಯಾಯಾಲಯವು ಕೇಂದ್ರದ ವಾದವನ್ನು ಒಪ್ಪಲಿಲ್ಲ. ತಾನು  700 ಟನ್‌ಗಳಿಗೆ ಆದೇಶ ನೀಡಿದ್ದು, ಈಗ ಪಡೆಯುತ್ತಿರುವುದು 550 ಟನ್‌ಗಳು. ಇದರಿಂದ ನಗರದ ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ನಾವು ಒಂದು ಸಣ್ಣ ಆದೇಶವನ್ನು ನಿರ್ದೇಶಿಸುತ್ತೇವೆ. ಸಂಜೆ 5 ಗಂಟೆಯವರೆಗೆ ನಾವು ನಿಮಗೆ ಸಮಯವನ್ನು ನೀಡುತ್ತೇವೆ ... ಸರಬರಾಜು ಮೂಲಗಳು ಯಾವುವು ಮತ್ತು ದಿಲ್ಲಿಯು 700 ಮೆಟ್ರಿಕ್ ಟನ್ ಗಳನ್ನು ಹೇಗೆ ಪಡೆಯುತ್ತದೆ ಎಂದು ನಮಗೆ ತಿಳಿಸಿ. ನಮಗೆ ನ್ಯಾಯಾಂಗ ನಿಂದನೆ ಬೇಡ. ವಾಸ್ತವಾಂಶದ ಮೇಲೆ ನಾವು ಕ್ರಮವನ್ನು ಬಯಸುತ್ತೇವೆ" ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News