ದ.ಕ.ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್ ಲೈನ್ ಸಭೆ

Update: 2021-05-05 11:50 GMT

ಮಂಗಳೂರು, ಮೇ 5: ಕೋವಿಡ್-19ಗೆ ಸಂಬಂಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್ ಲೈನ್ ನ ಸಭೆಯು ಸಂಚಾಲಕ ಐವನ್ ಡಿಸೋಜರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಹೆಲ್ಪ್ ಲೈನ್ ನಿಂದ ಕದ್ರಿ ಮಾರುಕಟ್ಟೆ ಎದುರು ಮೇ 5ರಿಂದ ಬೆಳಗ್ಗೆ 9ರಿಂದ 10ರವರೆಗೆ ‘ದಿ ಬ್ರೇಕ್ ಚೈನ್’ ಅಭಿಯಾನ ಕೈಗೊಳ್ಳುವುದು, ವ್ಯಾಕ್ಸಿನ್ ಕೊರತೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಸಭೆ ನಡೆಸುವುದು, ವೆನ್ಲಾಕ್ ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳ ಸಂಬಂಧಿಕರಿಗೆ ಮಧ್ಯಾಹ್ನ 1ರಿಂದ 1:30ರವರೆಗೆ ಊಟದ ವ್ಯವಸ್ಥೆ, ಅನಾರೋಗ್ಯ ಪೀಡಿತರಿಗೆ, ಟೆಂಪೋ-ರಿಕ್ಷಾ ಚಾಲಕರ ಮನೆಗೆ ತೆರಳಿ ದಿನಸಿ ಕಿಟ್ ವಿತರಣೆ, ರಕ್ತದ ಅಭಾವ ನೀಗಿಸಲು ಕೋವಿಡ್ ಹೆಲ್ಪ್ ಲೈನ್  ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೇ 8ರಂದು ಜಿಪ್ಪುಸೆಮಿನರಿ ಹಾಲ್ ನಲ್ಲಿ ರಕ್ತದಾನ ಶಿಬಿರ ಆಯೋಜಿಯಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭ ಮುಹಮ್ಮದ್ ಕುಂಜತ್ತಬೈಲ್, ನಾಗೇಂದ್ರ ಕುಮಾರ್, ವಿವೇಕ್ ರಾಜ್ ಪೂಜಾರಿ, ಜೇಮ್ಸ್ ಶಿವಭಾಗ್, ಆಶೀತ್ ಪಿರೇರಾ, ಆರೀಫ್ ಬಾವಾ ಬಂದರ್, ಪದ್ಮನಾಭ ಅಮೀನ್, ಟಿ. ಹೊನ್ನಯ್ಯ, ದುರ್ಗಾಪ್ರಸಾದ್, ತೆರೆಜಾ ಪಿಂಟೊ, ಗಣೇಶ್ ಪೂಜಾರಿ, ಎಂ.ಪಿ.ಮನೋರಾಜ್, ಸತೀಶ್ ಪೆಂಗಾಲ್, ಹಬೀಬ್ ಕಣ್ಣೂರು, ಅಲಿಸ್ಟರ್ ಡಿಕುನ್ಹಾ, ಯೂಸುಫ್ ಉಚ್ಚಿಲ್, ಯೋಗೀಶ್ ನಾಯ್ಕ್, ನಮಿತಾ ಡಿ. ರಾವ್, ಸಮರ್ಥ್ ಭಟ್, ಭಾಸ್ಕರ್ ರಾವ್, ಶೋಭಾ ಪಡೀಲ್, ದೀಕ್ಷಿತ್ ಅತ್ತಾವರ, ವಿದ್ಯಾ, ಎ.ಆರ್.ಇಮ್ರಾನ್, ಸಲೀಂ ಮಕ್ಕಾ, ನವಾಝ್ ಜೆಪ್ಪು, ಮಹೇಶ್ ಕೋಡಿಕಲ್ ಮತ್ತಿತರರು ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್‌ಫೋರ್ಸ್ ಸಹಾಯವಾಣಿಗೆ ಡಾ.ಶೇಖರ್ ಪೂಜಾರಿ-9448835552, ಡಾ. ಭಾಸ್ಕರ್ -9916263577, ಡಾ. ರಾಜಾರಾಮ್ -9448625780, ಡಾ. ಲೋರಿನ್ ಸಲ್ಡಾನ್ಹಾ -8861443794, ಡಾ. ರಾಜೇಶ್ ಸೂರಿಕುಮೇರು-9964339947, ಡಾ. ಸುರೇಖಾ -9448548183 ಅವರನ್ನು ನೇಮಿಸಲಾಗಿದೆ. ಸಾರ್ವಜನಿಕರು ತುರ್ತು ವೈದ್ಯಕೀಯ ಚಿಕೆತ್ಸೆಗಾಗಿ ಸಂಪರ್ಕಿಸಬಹುದು. ಅಲ್ಲದೆ ಆರೋಗ್ಯದ ಬಗ್ಗೆ ಸಲಹೆ-ಸೂಚನೆ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News