ಮಂಗಳೂರು: ವಂ. ಪೀಟರ್ ನೊರೊನ್ಹಾ ನಿಧನ

Update: 2021-05-05 11:55 GMT

ಮಂಗಳೂರು, ಮೇ 5: ನಗರದ ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ, ಹೋಮಿಯೊಪತಿ ಕಾಲೇಜು ಹಾಗೂ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಅಪಾರವಾಗಿ ಶ್ರಮಿಸಿದ್ದ ವಂ. ಪೀಟರ್ ನೊರೊನ್ಹಾ (85) ಬುಧವಾರ ಹೃದಯಾಘಾತದಿಂದ ನಿಧನರಾದರು.

ನಗರದ ಬೊಂದೇಲಿನಲ್ಲಿ 31.1.1936ರಂದು ಜನಿಸಿದ ಅವರು 1961ರಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಗುರುವಾಗಿ ನೇಮಕ ಗೊಂಡು ಬಜ್ಪೆ ಮತ್ತು ಬಿಜೈ ಚರ್ಚ್‌ಗಳಲ್ಲಿ ಸಹಾಯಕ ಧರ್ಮಗುರುವಾಗಿ ಹಾಗೂ ಕಾಟಿಪಳ್ಳ, ಉಡುಪಿ, ಮೊಡಂಕಾಪು-ಬಂಟ್ವಾಳ ಮತ್ತು ಬೆಂದೂರ್ ಚರ್ಚ್‌ಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು.

1978-1988ರವರೆಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿದ್ದ ಅವರು ಆಸ್ಪತ್ರೆಯ ಶತಮಾನೋತ್ಸವ (1980) ಕಾರ್ಯಕ್ರಮದ ಯಶಸ್ಸಿಗೆ ದುಡಿದಿದ್ದರು. ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆಯನ್ನು ಹಾಗೂ ಕರ್ನಾಟಕದ ಮೊದಲ ನರ್ಸಿಂಗ್ ಕಾಲೇಜನ್ನು ಸ್ಥಾಪಿಸುವಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು. ಫಾದರ್ ಮುಲ್ಲರ್ ಹೋಮಿಯೊಪತಿ ಮೆಡಿಕಲ್ ಕಾಲೇಜಿನಲ್ಲೂ ಸೇವೆ ಸಲ್ಲಿಸಿ ದ್ದಾರೆ. ನಿವೃತ್ತಿಯ ನಂತರ ಅವರು ಜೆಪ್ಪುವಿನ ವಿಶ್ರಾಂತ ಧರ್ಮಗುರುಗಳ ನಿವಾಸದಲ್ಲಿ ವಾಸಿಸುತ್ತಿದ್ದರು.

ವಂ.ಪೀಟರ್ ನೊರೊನ್ಹಾರ ನಿಧನಕ್ಕೆ ಮಂಗಳೂರು ಬಿಷಪ್ ಅ.ವಂ. ಪೀಟರ್ ಪಾವ್ಲೃ್ ಸಲ್ಡಾನ್ಹಾ ಹಾಗೂ ಮಂಗಳೂರು ಧರ್ಮಪ್ರಾಂತದ ಕ್ರೈಸ್ತರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News