ಮಂಗಳೂರು: ಆಕ್ಸಿಜನ್ ಬೆಡ್ ಹೆಚ್ಚಳಕ್ಕೆ ಕಾಂಗ್ರೆಸ್ ನಿಯೋಗ ಮನವಿ

Update: 2021-05-05 11:59 GMT

ಮಂಗಳೂರು, ಮೇ 5: ದ.ಕ ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ಸಂಚಾಲಕರಾದ ಐವನ್ ಡಿ ಸೋಜರವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ವತ್ತು ಜಿಲ್ಲಾ ಆರೋಗ್ಯಾಧಿಕಾರಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.

ಜಿಲ್ಲಾಲ್ಲಾಡಳಿತದಿಂದ ಕೋವಿಡ್ 19 ರೋಗ ಪೀಡೀತರಿಗೆ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚುವರಿ ಮಾಡುವಂತೆ ಈಗಿಂದಲೇ ಸೂಕ್ತ ಕ್ರಮ ಹಾಗೂ ಆಕ್ಸಿಜನ್ ಬಗ್ಗೆ ಜನರಿಗೆ ಇರುವ ಹೆದರಿಕೆ ದೂರ ಮಾಡಲು ಬೆಡ್‌ಗಳ ಸಂಖ್ಯೆಯನ್ನು ಆಸ್ಪತ್ರೆಗುಣವಾಗಿ ಪ್ರಕಟಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಒತ್ತಾಯಿಸಲಾಯಿತು.

ವ್ಯಾಕ್ಸಿನ್ ಬಯಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯಿರುವುದನ್ನು ಸರಕಾರ ಒಪ್ಪಿಕೊಳ್ಳಲು ಸಿದ್ದರಿರದೇ ಇರುವುದು ಮತ್ತು ವಾಸವವನ್ನು ಜನರಿಗೆ ತಿಳಿಸಲು ಸರಕಾರ ಹಿಂದೇಟು ಹಾಕುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. 18-44 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆ ಇಲ್ಲ ಎಂಬುದು ಸ್ಪಷ್ಟಪಡಿಸಬೇಕು. 45 ವರ್ಷಕ್ಕಿಂತ ಮೇಲ್ಪಟ್ಟರವರಿಗೆ ಎರಡನೇ ಡೋಸ್ ಮಾತ್ರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರೆ ಆಸ್ಪತ್ರೆಯ ಬಾಗಿಲಲ್ಲಿ ಕಾಯುವವರ ಸಂಖ್ಯೆ ಕಡಿಮೆಯಾಗಲು ಸಾಧ್ಯವಿದೆ. ಜತೆಗೆ 2ನೇ ಅಲೆಯನ್ನು ಎದುರಿಸಲು ವ್ಯಾಕ್ಸಿನ್ ಒಂದೇ ಮಾರ್ಗ ಅಲ್ಲ ಎಂಬುವುದನ್ನು ಜಿಲ್ಲಾ ಆರೋಗ್ಯಾಧಿ ಜನರಿಗೆ ಸ್ಪಷ್ಟಪಡಿಸಬೇಕು ಎಂದು ವ್ಯಾಕ್ಸಿನ್ ನೀಡುವ ಜವಬ್ದಾರಿಯನ್ನು ಹೊತ್ತಿರುವ ಡಾ.ರಾಜೇಶ್ ಇವರನ್ನು ತಮ್ಮ ಕಚೇರಿಯಲ್ಲಿ ಭೇಟಿ ಮಾಡಿ ನಿಯೋಗ ಒತ್ತಾಯಿಸಿತು.

ನಿಯೋಗದಲ್ಲಿ ಕಾರ್ಪೋರೇಟರ್ ಮುಹಮ್ಮದ್ ಕುಂಜತ್ತ ಬೈಲ್, ಮನುರಾಜ್, ಆರೀಫ್, ಸತೀಶ್ ಪೆಂಗಲ್, ತೆರೆಜಾ ಪಿಂಟೋ, ಯೂಸೂಫ್ ಕುದ್ರೋಳಿ, ಶ್ರೀ ಮಹೇಶ್ ಕುಮಾರ್, ದೀಕ್ಷಿತ್, ಅಶಿತ್ ಪಿರೇರಾ, ಯೋಗಿಶ್ ನಾಯಕ್, ವಿವೇಕ್‌ರಾಜ್ ಪೂಜಾರಿ, ಅಭಿಬುಲ್ಲ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News