ಕೊರೋನವೈರಸ್ ಓಡಿಸಲು ನೀರಿನ ಕೊಡ ಹೊತ್ತು ದೇವಸ್ಥಾನದತ್ತ ಸಾಗಿದ ನೂರಾರು ಮಹಿಳೆಯರು!

Update: 2021-05-05 12:36 GMT

ಅಹ್ಮದಾಬಾದ್ : ಗುಜರಾತ್‍ನ ಅಹ್ಮದಾಬಾದ್ ಜಿಲ್ಲೆಯ ಸನಂದ್ ತಾಲೂಕಿನ ನವಪುರ ಎಂಬ ಗ್ರಾಮದಲ್ಲಿ  "ಕೊರೋನವೈರಸ್ ಅನ್ನು ನಿರ್ಮೂಲನೆಗೊಳಿಸಲು" ನೂರಾರು ಮಹಿಳೆಯರು ತಮ್ಮ ತಲೆಯ ಮೇಲೆ ನೀರಿನ ಕೊಡಗಳನ್ನು ಹೊತ್ತುಕೊಂಡು  ದೇವಸ್ಥಾನವೊಂದರತ್ತ ಸಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗ್ರಾಮದ ಸರಪಂಚ ಗಫಾಭಾಯಿ ಠಾಕುರ್ ಸಹಿತ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮೆರವಣಿಗೆ ಮೇ 3ರಂದು ನಡೆದಿದೆಯೆನ್ನಲಾಗಿದ್ದು ವೀಡಿಯೋದಲ್ಲಿ ಮಹಿಳೆಯರು ಹೊತ್ತು ತಂದಿದ್ದ ಕೊಡಗಳ ನೀರನ್ನು ಕೆಲ ಪುರುಷರು ದೇವಸ್ಥಾನದ ಗೋಪುರದಿಂದ ಸುರಿಯುತ್ತಿರುವುದೂ ಕಾಣಿಸುತ್ತದೆ.

ಗ್ರಾಮದ ಬಲಿಯದೇವ್ ದೇವಸ್ಥಾನದ ಗೋಪುರಕ್ಕೆ ನೀರು ಸುರಿದರೆ ಕೊರೋನ ವೈರಸ್ ನಿರ್ಮೂಲನೆಗೊಳ್ಳಲಿದೆ ಎಂದು ಗ್ರಾಮಸ್ಥರು ನಂಬಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News